ದೇವಸ್ಥಾನಗಳಿಂದ ಮಾನಸಿಕ ನೆಮ್ಮದಿ- ಅದಮಾರು ಶ್ರೀ

7

ದೇವಸ್ಥಾನಗಳಿಂದ ಮಾನಸಿಕ ನೆಮ್ಮದಿ- ಅದಮಾರು ಶ್ರೀ

Published:
Updated:

ಕುಕ್ಕೆಹಳ್ಳಿ (ಬ್ರಹ್ಮಾವರ): ಆಧುನಿಕ ಜಂಜಾಟಕ್ಕೆ ಸಿಲುಕಿ ವ್ಯಕ್ತಿಯ ನೆಮ್ಮದಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ದೇವಸ್ಥಾನಗಳ ಮೂಲಕ ದೈಹಿಕ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.ಜೀರ್ಣೋದ್ಧಾರಗೊಳ್ಳುತ್ತಿರುವ ಕುಕ್ಕೆಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ನಿಧಿಕುಂಭ ಸ್ಥಾಪನೆ ಮಾಡಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಊರಿನಲ್ಲಿರುವ ದೇವಸ್ಥಾನಗಳ ಅಭಿವೃದ್ಧಿಯಿಂದ ಇಡೀ ಗ್ರಾಮ ಸುಭಿಕ್ಷವಾಗಿರುತ್ತದೆ. ಆದ್ದರಿಂದ ಗ್ರಾಮಸ್ಥರು ಊರಿನ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಅವರು ಹೇಳಿದರು.ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ಪುತ್ರನ್‌ಕುಕ್ಕೆಹಳ್ಳಿ ಗ್ರಾ.ಪಂ ಅಧ್ಯಕ್ಷೆ ಗಿರಿಜಾ ಸಾಲಿಯಾನ್, ಓರಿಯಂಟಲ್ ಬ್ಯಾಂಕ್‌ನ ಮಾಜಿ ಆಡಳಿತ ನಿರ್ದೇಶಕ ಎಚ್‌ರತ್ನಾಕರ ಹೆಗ್ಡೆ, ಜಿ.ಪಂ ಪ್ರಭಾರ ಅಧ್ಯಕ್ಷ ಉಪೇಂದ್ರ ನಾಯಕ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ನರಸಿಂಗ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇಗೌಡ, ಸಮಿತಿಯ ಗೌರವ ಸಲಹೆಗಾರ ಎರ್ಮಾಳು ಶಶಿಧರ್ ಶೆಟ್ಟಿ, ಕಾರವಾರದ ಉದ್ಯಮಿ ಎಂ.ಆರ್.ಶೆಟ್ಟಿ, ದಾನಿಗಳಾದ ರೋಹಿತ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಜಯರಾಮ್ ಶೆಟ್ಟಿ, ಪಾಡಿಗಾರು ಶ್ರೀನಿವಾಸ ತಂತ್ರಿ ಮತ್ತಿತರರು ಇದ್ದರು.ರೋಹಿತ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry