ದೇವಸ್ಥಾನಗಳಿಗೆ ಬೀಗ ಹಾಕಿ ಪ್ರತಿಭಟನೆಗೆ ನಿರ್ಧಾರ

7

ದೇವಸ್ಥಾನಗಳಿಗೆ ಬೀಗ ಹಾಕಿ ಪ್ರತಿಭಟನೆಗೆ ನಿರ್ಧಾರ

Published:
Updated:
ದೇವಸ್ಥಾನಗಳಿಗೆ ಬೀಗ ಹಾಕಿ ಪ್ರತಿಭಟನೆಗೆ ನಿರ್ಧಾರ

ಮೈಸೂರು: `ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿ ರುವ ಅರ್ಚಕರು ಮತ್ತು ಆಗಮಿಕರ ವೇತನ ಹೆಚ್ಚಳ ಮಾಡದಿದ್ದರೆ ಎಲ್ಲ ದೇವಸ್ಥಾನಗಳಿಗೆ ಬೀಗ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು~ ಎಂದು ಕರ್ನಾ ಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ ಹೇಳಿದರು.ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಅರ್ಚಕರು, ಆಗಮಿಕರ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಅರ್ಚಕರಿಗೆ ಅರ್ಹತಾ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ರಾಜ್ಯದಲ್ಲಿ 36 ಸಾವಿರ ಮುಜರಾಯಿ ದೇವಸ್ಥಾನಗಳಿದ್ದು, 1.5 ಲಕ್ಷ ಅರ್ಚಕರು ಸೇವೆ ಸಲ್ಲಿಸುತ್ತಿದ್ದಾರೆ. ಅರ್ಚಕರಿಗೆ ಪ್ರತಿ ತಿಂಗಳು 12 ಸಾವಿರ ರೂಪಾಯಿ ಸಂಬಳ  ನೀಡಲಾಗುವುದು ಎಂದು ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ~ ಎಂದು ಹೇಳಿದರು.`ಅರ್ಚಕರಿಗೆ ಆಶ್ರಯ ಯೋಜನೆಯಡಿ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು. ಬಿಪಿಎಲ್ ಕಾರ್ಡ್ ನೀಡಬೇಕು. ಏಕರೂಪ ಕಾಯ್ದೆಯನ್ನು ರದ್ದುಗೊಳಿಸಬೇಕು. ರಾಜ್ಯ ಧಾರ್ಮಿಕ ಪರಿಷತ್ತಿಗೆ 7 ಮಂದಿ ಆಗಮಿಕ ಪಂಡಿತರನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಹಾಗೂ ಮುಜರಾಯಿ ಸಚಿವರ ಮನೆ ಮುಂದೆ ಹೋಮ ನಡೆಸಬೇಕು, ಹೆದ್ದಾರಿ ತಡೆ ನಡೆಸಿ ಘಂಟಾನಾದ ಜಾಥಾ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ. ಇಷ್ಟಾದ ಮೇಲೂ ಸರ್ಕಾರ ಎಚ್ಚೆತ್ತುಕೊ ಳ್ಳದಿದ್ದರೆ ದೇವಸ್ಥಾನಗಳ ಬಾಗಿಲು ಮುಚ್ಚಲಾಗುವುದು~ ಎಂದು ಎಚ್ಚರಿಕೆ ನೀಡಿದರು.ಬೆಂಗಳೂರಿನ ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ, `ರಾಜ್ಯ ಧಾರ್ಮಿಕ ಪರಿಷತ್ತಿಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಅಧ್ಯಕ್ಷರ ನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ. ಅವರಿಗೆ ಅರ್ಚಕರ ಸಮಸ್ಯೆ ಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಪರಿಷತ್ತಿಗೆ ಅರ್ಚಕರು ಹಾಗೂ ಆಗಮಿಕರನ್ನು ನೇಮಕ ಮಾಡಬೇಕು. ಸಂಸ್ಕೃತ ವಿಶ್ವವಿದ್ಯಾ ನಿಲಯಕ್ಕೆ ಜೋಡಣೆ ಮಾಡಲಾಗಿ ರುವ ಆಗಮಿಕ ಪಾಠಶಾಲೆಗಳನ್ನು ಅದರ ವ್ಯಾಪ್ತಿಯಿಂದ ಹೊರಗಿಡ ಬೇಕು~ ಎಂದು ಒತ್ತಾಯಿಸಿದರು.ಅರ್ಚಕರಿಗೆ ಅರ್ಹತಾ ಪತ್ರ, ಗುರುತಿನ ಚೀಟಿ ಹಾಗೂ ಚೆಕ್ ವಿತರಣೆ ಮಾಡಲಾಯಿತು. ಗಾವಡಗೆರೆ ಗುರುಜಂಗಮ ಮಠದ ನಟರಾಜ್ ಸ್ವಾಮೀಜಿ, ಬೆಂಗಳೂರಿನ ದೇವಿಶ್ರೀ ಫೌಂಡೇಷನ್ ಟ್ರಸ್ಟ್‌ನ ರಾಮಸ್ವಾಮಿ ಸ್ವಾಮೀಜಿ, ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಭಾಷ್ಯಂ ಸ್ವಾಮೀಜಿ, ಮೈಸೂರು ಜಿಲ್ಲಾ ಅರ್ಚಕರ ಸಂಘದ ಉಪಾಧ್ಯಕ್ಷ ಹಂಪಾಪುರ ರಾಜಣ್ಣ, ಶಾಸಕ ಚಿಕ್ಕಮಾದು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry