ಬುಧವಾರ, ಜೂನ್ 23, 2021
24 °C

ದೇವಸ್ಥಾನಗಳ ಆಡಳಿತ ಮಂಡಳಿ ರದ್ದು ಅನೂರ್ಜಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 240 ದೇವಸ್ಥಾನ­ಗಳಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಆಡಳಿತ ಮಂಡಳಿಗಳನ್ನು ರದ್ದು ಮಾಡಿದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಹೈಕೋರ್ಟ್‌ ಗುರುವಾರ ಅನೂರ್ಜಿತಗೊಳಿಸಿದೆ.ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನಗಳಿಗೆ ಜಿಲ್ಲಾ ಧಾರ್ಮಿಕ ಪರಿಷತ್ತಿನ ಮೂಲಕ ಆಡಳಿತ ಮಂಡಳಿ ರಚಿಸಿ ಸದಸ್ಯರನ್ನು ನೇಮಕ ಮಾಡಿ ಆಗಿನ ಬಿಜೆಪಿ ಸರ್ಕಾರ 2012ರ ನ. 29ರಂದು ಆದೇಶ ಹೊರಡಿಸಿತ್ತು.ನಂತರ ಬಂದ ಕಾಂಗ್ರೆಸ್ ಸರ್ಕಾರ ಈ ಎಲ್ಲ ಆಡಳಿತ ಮಂಡಳಿಗಳನ್ನು ರದ್ದು ಮಾಡಿ 2013ರ ಆಗಸ್ಟ್‌ 26ರಂದು ಆದೇಶಿಸಿತು. ಇದನ್ನು ಪ್ರಶ್ನಿಸಿ ಉಡುಪಿ ಜಿಲ್ಲೆಯ ಉಪ್ಪೂರಿನ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಪರಮೇಶ್ವರ ಮಧ್ಯಸ್ಥ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.ಇದರ ವಿಚಾರಣೆಯನ್ನು ನ್ಯಾಯ­ಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ಆಡಳಿತ ಮಂಡಳಿಯ ಸದಸ್ಯರನ್ನು ನೇಮಕ ಮಾಡುವ, ಅವರನ್ನು ವಜಾ­ಗೊ­ಳಿಸುವ ಅಧಿಕಾರ ತನಗಿದೆ ಎಂದು ಸರ್ಕಾರ ಪೀಠದ ಎದುರು ವಾದಿಸಿತ್ತು.‘ಸಮಿತಿಯ ಸದಸ್ಯರನ್ನು ವಜಾ­ಗೊಳಿ­ಸುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ ಸಮಿತಿಯನ್ನೇ ರದ್ದು ಮಾಡುವ ಅಧಿಕಾರ ಇಲ್ಲ. ಸಮಿತಿಯನ್ನು ರದ್ದು ಮಾಡುವ ಮುನ್ನ ಅದರ ವಿರುದ್ಧ ತನಿಖೆ ನಡೆಸ­ಬೇಕು.  ಸಮಿತಿ ಅವ್ಯವಹಾರ ನಡೆಸಿದೆ ಎಂಬುದು ಸಾಬೀತಾಗಬೇಕು’ ಎಂದು ಪೀಠ  ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.