ಮಂಗಳವಾರ, ಏಪ್ರಿಲ್ 20, 2021
32 °C

ದೇವಸ್ಥಾನ ನೆಲಸಮ - ಅರ್ಚಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: ನಗರದ ಅಗ್ರಹಾರ ದಾಸರಹಳ್ಳಿಯ ಅಂಬೇಡ್ಕರ್ ಕ್ರೀಡಾಂಗಣದ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಿದ್ದ ಶನೇಶ್ವರಸ್ವಾಮಿ ದೇವಾಲಯವನ್ನು ಬಿಬಿಎಂಪಿ ತೆರವು ಗೊಳಿಸಿದ್ದು ಇದನ್ನು ವಿರೋಧಿಸಿ ದೇವಾಲಯದ ಅರ್ಚಕ ಚನ್ನಿಂಗಪ್ಪ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.‘ಬುಧವಾರ ರಾತ್ರಿ ವೇಳೆ ಬಂದ ಬಿಬಿಎಂಪಿ ಅಧಿಕಾರಿಗಳು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಹಾಯದಿಂದ  ಕಟ್ಟಡವನ್ನು ಧ್ವಂಸಗೊಳಿಸಿ ರಾತ್ರೋರಾತ್ರಿ ಬೀದಿ ಪಾಲು ಮಾಡಿದರು’ ಎಂದು ಚನ್ನಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

 

’ಮೊದಲು ಜೆಸಿಬಿ ಚಾಲಕ ದೇವಾಲಯವನ್ನು ಕೆಡವಲು ಮುಂದಾಗದ ಕಾರಣ ಪೊಲೀಸ್ ಸಿಬ್ಬಂದಿಯೇ ಕಟ್ಟಡವನ್ನು ಕೆಡವಿದರು. 15ಕ್ಕೂ ಹೆಚ್ಚು ಚೀಲ ಅಕ್ಕಿ, ದೇವರ ವಿಗ್ರಹಗಳು ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಬಿಬಿಎಂಪಿ ಅಧಿಕಾರಿಗಳೇ ಕೊಂಡೊಯ್ದರು’ ಎಂದು ಅವರು ಆರೋಪಿಸಿದರು.‘ಸುಮಾರು 30ಕ್ಕೂ ಹೆಚ್ಚು ವರ್ಷಗಳಿಗಿಂತಲೂ ಇದೇ ಸ್ಥಳದಲ್ಲಿ ವಾಸ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದೆ. ನ್ಯಾಯಾಲಯದ ಆದೇಶದ ಮೇರೆಗೆ ದೇವಾಲಯ ತೆರವುಗೊಳಿಸುತ್ತಿರುವುದಾಗಿ ಅಧಿಕಾರಿಗಳು ಪತ್ರ ನೀಡಿದರು. ಅದೇ ರಾತ್ರಿ ಸಮಯಾವಕಾಶ ಕೂಡ ನೀಡದೇ ದೇವಾಲಯ ತೆರವುಗೊಳಿಸಲಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

 

‘ಸೂಕ್ತ ಪರಿಹಾರ ನೀಡಿ ದೇವಸ್ಥಾನ ಮರುನಿರ್ಮಾಣ ಮಾಡಿಕೊಡಬೇಕು. ಅಥವಾ ಬೇರೆ ಸ್ಥಳದಲ್ಲಾದರೂ ದೇವಸ್ಥಾನ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲವಾದರೆ ನನ್ನ ಉಸಿರು ಇರುವವರೆವಿಗೂ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ವಿಜಯಕುಮಾರ್ ಈ ಕೃತ್ಯವನ್ನು ಖಂಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.