ಮಂಗಳವಾರ, ಮೇ 11, 2021
27 °C

ದೇವಾಲಯಕ್ಕೆ ಹೆಚ್ಚಿನ ಅನುದಾನ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಪ್ರಸಕ್ತ ರಾಜ್ಯ ಸರ್ಕಾರ  ತಾಲ್ಲೂಕಿನ ವಿವಿಧ ದೇವಾಲಯಗಳ ಜೀರ್ಣೋದ್ಧಾರ, ನವೀಕರಣ, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಎಂದು ಶಾಸಕ ಬಿ.ಪಿ. ಹರೀಶ್ ಹರ್ಷ ವ್ಯಕ್ತಪಡಿಸಿದರು.ಸಮೀಪದ ಕೊಮಾರನಹಳ್ಳಿ ಮೇಜರ್ ಮುಜರಾಯಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ದೇವಾಲಯದ `ಯಾತ್ರಿ ನಿವಾಸ~ಕ್ಕೆ ಭಾನುವಾರ ಅವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ದೇವಾಲಯ ನವೀಕರಣಕ್ಕೆ ರೂ 2.50 ಲಕ್ಷ, ನೂತನ ಸಮುದಾಯ ಭವನಕ್ಕೆ ರೂ 1 ಕೋಟಿ ಮಂಜೂರಾಗಿದೆ.

 

ಈಗಾಗಲೇ ರೂ 50 ಲಕ್ಷ ವೆಚ್ಚದಲ್ಲಿ ಹೆಳವನಕಟ್ಟೆ ಕೆರೆ ಕೆಲಸ ಸಾಗಿದೆ. ಸಾರಥಿ, ಧೂಳೆಹೊಳೆ, ಭಾನುವಳ್ಳಿ, ಕೊಂಡಜ್ಜಿ, ವಾಸನ ಶೇರಾಪುರ ದೇವಾಲಯ ನವೀಕರಣಕ್ಕೂ ಅನುದಾನ  ಬಿಡುಗಡೆಯಾಗಿದೆ. ಈ ಭಾಗದಲ್ಲಿ ಹರಿಹರ-ಹೊನ್ನಾಳಿ ಬಿಟ್ಟರೆ ಪ್ರವಾಸಿ ಮಂದಿರ ಇಲ್ಲ.ಯಾತ್ರಿಕರು ಉಳಿದುಕೊಳ್ಳಲು ತೊಂದರೆ ಆಗುತ್ತಿತ್ತು. ಬಹುದಿನದ ಬೇಡಿಕೆ ಈಡೇರಿದೆ  ಪ್ರಸ್ತುತ ವಿನ್ಯಾಸ ಬದಲಿಸಿ ನೆಲಮಹಡಿಯಲ್ಲಿ 3 ಸುಸಜ್ಜಿತ ಕೊಠಡಿ ಹಾಗೂ ಮೊದಲ ಮಹಡಿಯಲ್ಲಿ 2 ಹಾಲ್ ನಿರ್ಮಿಸಿ. ಇಲ್ಲಿ ಉಳಿದುಕೊಳ್ಳುವವರಿಂದ ಪಾಲನೆ ವೆಚ್ಚ ವಸೂಲಿ ಮಾಡಿ ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್, ಆವರಗೆರೆ ಶ್ಯಾನುಭೋಗ ರಂಗನಾಥರಾವ್, ಪಿಗ್ಮಿ ರಾಮಣ್ಣ, ಆಡಳಿತಾಧಿಕಾರಿ ಹಾಲೇಶಪ್ಪ, ಮುಜರಾಯಿ ಶ್ಯಾನುಬೋಗ್ ಧರ್ಮರಾವ್, ರಾಮಚಂದ್ರಾಚಾರ್, ರಂಗನಾಥ್, ಶಿವಲಿಂಗಪ್ಪ, ಗದ್ದಿಗೆಪ್ಪ, ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ್, ಅರ್ಚಕ ಮಂಜುನಾಥಾಚಾರ್, ಐರಣಿ ಮೂರ್ತಿ, ಉಪಾಧಿವಂತ ಅಮರನಾಥ್ ಜೋಯ್ಸ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.