ದೇವಾಲಯಗಳ ನಾಶ- ಕ್ರಮಕ್ಕೆ ಚಿಮೂ ಒತ್ತಾಯ

7

ದೇವಾಲಯಗಳ ನಾಶ- ಕ್ರಮಕ್ಕೆ ಚಿಮೂ ಒತ್ತಾಯ

Published:
Updated:

ಬೆಂಗಳೂರು:  `ಹಂಪಿಯ ಮೌಲ್ಯಯುತ ದೇವಾಲಯಗಳನ್ನು ನಾಶ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು~ ಎಂದು ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ಒತ್ತಾಯಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಂಪಿಯ ರಘುನಾಥ ದೇವಾಲಯದ ಹತ್ತಿರವಿರುವ `ಗಾಳಿ ಗೋಪುರ~ ದ ಕಂಬಗಳನ್ನು ರಾತ್ರಿ ವೇಳೆಯಲ್ಲಿ ದುಷ್ಟರು ಮುರಿದು ನೆಲಸಮ ಮಾಡಿರುವ ವಿಷಯ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಖಂಡನಾರ್ಹವಾಗಿದೆ.

 

ಈ ರೀತಿ ಹಿಂದೂ ದೇವಾಲಯಗಳನ್ನು ನಾಶ ಮಾಡುತ್ತಿರುವುದು ಇದೇ ಮೊದಲಲ್ಲ. ಇದರ ಹಿಂದೆ ವಿಗ್ರಹ ಭಂಜಕರ ಕೈವಾಡವಿದೆ~ ಎಂದು ಆರೋಪಿಸಿದರು. `ಈ ಕೃತ್ಯವು ಹಿಂದೂ ಅಥವಾ ಮುಸ್ಲಿಂ ಯಾರದೇ ಆಗಿರಲಿ, ಅವರನ್ನು ಶಿಕ್ಷಿಸಬೇಕು. ಹಂಪಿ ಬಹು ವಿಸ್ತಾರವಾದ ಪ್ರದೇಶವಾಗಿರುವುದರಿಂದ ರಾತ್ರಿಯಿಡೀ ಕಾವಲುಗಾರರನ್ನು ನೇಮಿಬೇಕು~ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry