ದೇವಾಲಯದ ಜೀರ್ಣೋದ್ಧಾರ

ಶನಿವಾರ, ಜೂಲೈ 20, 2019
24 °C

ದೇವಾಲಯದ ಜೀರ್ಣೋದ್ಧಾರ

Published:
Updated:

ನೆಲಮಂಗಲ: `ಮಾನವನ ಜನ್ಮ ಸಾರ್ಥಕವಾಗಬೇಕಾದರೆ ಸೇವೆ ಮಾಡಬೇಕು. ಸೇವೆಯಲ್ಲಿಯೇ ಭಗವಂತನನ್ನು ಕಾಣು ವಂತಾ ಗಬೇಕು~ ಎಂದು ದಾನಿ ಸಿ. ಗಂಗಾಧರಮೂರ್ತಿ ಅಭಿಪ್ರಾಯಪಟ್ಟರು.

 ಇಲ್ಲಿಗೆ ಸಮೀಪದ ಲಕ್ಕೇನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿಯ ಕೋರಮಂಗಲದ ಚೆನ್ನಿಗರಾಯಸ್ವಾಮಿ ದೇವಾಲಯದ ಪ್ರತಿಷ್ಠಾಷ್ಟಬಂಧ ಬ್ರಹ್ಮ ಕಲಶೋತ್ಸವದ ಅಂಗವಾಗಿ ನಡೆದ ಧರ್ಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.`ಸುಮಾರು 750 ವರ್ಷಗಳ ಇತಿಹಾಸವಿರುವ ಪುರಾಣ ಪ್ರಸಿದ್ಧ ಈ ದೇಗುಲದ ಜೀರ್ಣೋದ್ಧಾರ ಕಾರ್ಯ 2004ರಲ್ಲಿ ಭಕ್ತರ ಸಂಕಲ್ಪದಂತೆ ಪ್ರಾರಂಭಿಸಲಾಯಿತು. ಕರಾವಳಿಯ ಶೈಲಿಯಲ್ಲಿ ವಿನೂತನವಾಗಿ ನಿರ್ಮಿಸಲಾಗಿದೆ~ ಎಂದರು.ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ.ಕೃಷ್ಣಪ್ಪ ಮಾತನಾಡಿ, ಮೂಲ ಚೆನ್ನಿಗರಾಯಸ್ವಾಮಿ, ಲಕ್ಷ್ಮೀ ಮತ್ತು ಬೃಹತ್ ಆಂಜನೇಯಸ್ವಾಮಿ ವಿಗ್ರಹವನ್ನು ಉಳಿಸಿಕೊಂಡು ಹೊಸದಾಗಿ ಗಣಪತಿ ಮತ್ತು ನವಗ್ರಹಗಳನ್ನು ಸ್ಥಾಪಿಸಲಾಗಿದೆ. ನಿಸರ್ಗ ರಮಣೀಯವಾದ ಕ್ಷೇತ್ರದಲ್ಲಿ ಭಕ್ತರಿಗೆ ವಸತಿ ಸೌಲಭ್ಯವನ್ನು ಕಲ್ಪಿಲಾಗಿದೆ ಎಂದು ತಿಳಿಸಿದರು.

 

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದಂಪತಿ, ದಾನಿಗಳಾದ ಕೆ.ಗೋಪಾಲಯ್ಯ, ಟಿ.ಗಂಗಾಧರ್, ಕೆ.ರಂಗಣ್ಣ, ಎಂ.ಜನಾರ್ಧನ್, ಕೆ.ಪಿ.ವಿಜಯ, ಕುಸುಮ ಗಂಗಾಧರಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ವಿಜಯ, ಶ್ರೀನಿವಾಸ್, ಪ್ರಕಾಶ್, ಚಂದ್ರಪ್ಪ, ಪೂಜಾ ಕಾರ್ಯಗಳಲ್ಲಿ ಭಾಗಿಗಳಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry