ದೇವಾಲಯದ ಮಹಾದ್ವಾರಕ್ಕೆ ಹಾನಿ: ಪ್ರತಿಭಟನೆ

7

ದೇವಾಲಯದ ಮಹಾದ್ವಾರಕ್ಕೆ ಹಾನಿ: ಪ್ರತಿಭಟನೆ

Published:
Updated:
ದೇವಾಲಯದ ಮಹಾದ್ವಾರಕ್ಕೆ ಹಾನಿ: ಪ್ರತಿಭಟನೆ

ಮೂಡಿಗೆರೆ: ನಿರ್ಮಾಣ ಹಂತದಲ್ಲಿದ್ದ ದೇವಾ­­­ಲಯದ ಮಹಾದ್ವಾರವನ್ನು ಗುರು­­ವಾರ ರಾತ್ರಿ ದುಷ್ಕರ್ಮಿಗಳು ಹಾನಿ­­ಗೊಳಿಸಿದ್ದಾರೆ.

ಈ ಕೃತ್ಯವನ್ನು ಖಂಡಿಸಿ ಶುಕ್ರವಾರ ವಿವಿಧ ಸಂಘಟನೆಗಳು, ಪಕ್ಷಗಳು, ಸಾರ್ವ­ಜನಿಕರು, ಗ್ರಾಮಸ್ಥರು ಪ್ರತಿಭಟನೆ, ರಸ್ತೆ ತಡೆ ನಡೆಸಿದರು.ತಾಲ್ಲೂಕಿನ ಹೆಸ್ಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಳದ ಕೆರೆಮನೆ ಶ್ರೀ ಏಳುಮುಖ ಚೌಡೇಶ್ವರಿ ದೇವಿ ದೇವಾಲಯಕ್ಕೆ ವಾರದ ಹಿಂದೆ, ಬಿಳಗುಳದ  ಕೆ.ಎಂ.ರಸ್ತೆಯ ತಿರುವಿ­ನಲ್ಲಿ ಮಹಾದ್ವಾರವನ್ನು ನಿರ್ಮಿಸಲು ದೇವಾ­ಲಯ ಸಮಿತಿ ತೀರ್ಮಾನಿಸಿ, ಕಾಮಗಾರಿಯನ್ನು ಪ್ರಾರಂಭಿಸಿತ್ತು.ಈ ವೇಳೆ ಪಕ್ಕದ ಪ್ರದೇಶದವರಾದ ಸೋಷಿ­­ಯಲ್‌ ಡೆಮಾಕ್ರಟಿಕ್‌ ಪಾರ್ಟಿ ಜಿಲ್ಲಾ ಕಾರ್ಯ­ದರ್ಶಿ ಬಿಳಗುಳ ಅಲ್ತಾಫ್‌ ಎಂಬುವವರು ಹೆಸ್ಗಲ್‌ ಗ್ರಾಮ ಪಂಚಾಯಿತಿಗೆ ದೂರವಾಣಿ ಕರೆ ಮಾಡಿ, ಅನುಮತಿ ಇಲ್ಲದೇ ದ್ವಾರ­ವನ್ನು ನಿರ್ಮಿಸ­ಲಾ­ಗು­ತ್ತಿದೆ ಎಂದು ಆರೋ­­ಪಿಸಿದ ಹಿನ್ನೆಲೆಯಲ್ಲಿ ಕಾಮ­ಗಾರಿ­ ಸ್ಥಗಿತಗೊಳಿಸಿ, ಗ್ರಾಮ ಪಂಚಾ­­ಯಿತಿಯ ಸರ್ವ ಸದಸ್ಯರ ಸಭೆ ನಡೆಸಿ, ಮಹಾದ್ವಾರ ನಿರ್ಮಾ­ಣಕ್ಕೆ ನಿರ್ಣಯ ಕೈಗೊಂಡು, ಅನುಮತಿ ನೀಡ­ಲಾಗಿತ್ತು.ಅನುಮತಿ ಪಡೆದ ನಂತರ ಮೂರು ದಿನ­ಗಳ ಹಿಂದೆ ರಸ್ತೆಯ ಎರಡೂ ಬದಿ­ಯಲ್ಲಿ ಕಬ್ಬಿಣದ ಪೈಪುಗಳನ್ನು ಅಳ­ವಡಿ­ಸಿ­, ಅದಕ್ಕೆ ಸುಮಾರು ಮೂರು ಅಡಿ ಎತ್ತರಕ್ಕೆ ಸಿಮೆಂಟಿನ ಕಟ್ಟಡವನ್ನು ಕಟ್ಟ­­ಲಾಗಿತ್ತು. ಗುರುವಾರ ರಾತ್ರಿ ದಾಳಿ ನಡೆ­ಸಿ­­ರುವ ದುಷ್ಕರ್ಮಿ­ಗಳು, ಸಿಮೆಂ­ಟಿನ ಕಟ್ಟಡವನ್ನು ಧ್ವಂಸ­ಗೊಳಿ­ಸಿದ್ದಾರೆ.ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು, ದೇವಾಲಯ ಸಮಿತಿ ಸದಸ್ಯರು, ವಿವಿಧ ಹಿಂದೂಪರ ಸಂಘ­ಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿ­ಭಟನೆ ನಡೆಸಿ, ಧ್ವಂಸ ಪ್ರಕರಣದಲ್ಲಿ ದ್ವಾರ ನಿರ್ಮಾಣದ ವೇಳೆ ಆಕ್ಷೇಪಣೆ ವ್ಯಕ್ತ ಪಡಿಸಿದ್ದ ಅಲ್ತಾಫ್‌ ಅವರ ಕೈವಾ­ಡವಿದ್ದು, ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ­ದರು. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry