ದೇವಾಲಯ ಸಂರಕ್ಷಿಸಲು ಆಗ್ರಹ'

7

ದೇವಾಲಯ ಸಂರಕ್ಷಿಸಲು ಆಗ್ರಹ'

Published:
Updated:

ಕುಕನೂರು:  ಪುರಾತನ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ ನವಲಿಂಗೇಶ್ವರ ದೇವಾಲಯವನ್ನು ಸಂರಕ್ಷಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಲ್ಲಿಯ ಮಯಾಮಾಯಾ ದೇವಸ್ಥಾನದ ಆವರಣದಲ್ಲಿ 9ನೇ ಶತಮಾನದಲ್ಲಿ ನಿರ್ಮಿಸಿದ ನವಲಿಂಗೇಶ್ವರ ದೇವಾಲಯ ಒಂದೇ ಸೂರಿಯನಲ್ಲಿ ನಿರ್ಮಿಸಿದ ಅಪರೂಪದ ದೇವಾಲಯ, ಒಂದೇ ಸೂರಿನ ಅಡಿಯಲ್ಲಿ 9 ಪ್ರತ್ಯೇಕ ಶಿವಾಲಯಗಳನ್ನು ಪ್ರತಿಷ್ಠಾಪಿಸಿದ್ದು ರಾಜ್ಯದಲ್ಲೆ ಇದೊಂದೆ ಆಗಿದೆ.ಇಂತಹ ಅಪರೂಪದ ದೇವಸ್ಥಾನವನ್ನು ಸಂರಕ್ಷಿಸಬೇಕಾದ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಪವಿತ್ರ ದೇವಸ್ಥಾನ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿವರ್ತನೆ ಆಗಿದೆ. ಮೇಲಾಗಿ ಮಯಾಮಾಯಾ ದೇವಸ್ಥಾನದ ಕಲ್ಯಾಣ ಮಂಟಪದ ಊಟದ ಎಲೆ, ಪ್ಲಾಸ್ಟಿಕ್ ಗ್ಲಾಸ್, ಸೇರಿದಂತೆ ಮತ್ತಿತರೆ ತ್ಯಾಜ್ಯವನ್ನು ದೇವಾಲಯದ ಹಿಂಬದಿಯ ಕಟ್ಟಡ ಸಮೀಪದಲ್ಲಿ ಹಾಕಿ ಆಗಿಂದಾಗ್ಗೆ ಬೆಂಕಿ ಹಂಚಿ ಸುಡುವುದರಿಂದ ಕಟ್ಟಡ ಹಾಳಾಗುವುದರ ಜೊತೆಗೆ ಐತಿಹಾಸಿಕ ಪರಂಪರೆ ನಮ್ಮಿಂದ ಕಣ್ಮರೆ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಪುರಾತನ ದೇಗುಲವನ್ನು ಸಂರಕ್ಷಿಸಲು ಮುಂದಾಗಬೇಕೆಂದು ಹೊಸಳ್ಳಿ ರಾಮರಾವ್, ರವಿ ಜಕ್ಕಾ, ನಾಗಪ್ಪ ಕಲ್ಮನಿ, ನಾಗಪ್ಪ ಅಸಲಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry