ದೇವಾಲಯ ಸರ್ಕಾರದ ವಶಕ್ಕೆ

7

ದೇವಾಲಯ ಸರ್ಕಾರದ ವಶಕ್ಕೆ

Published:
Updated:

ಬೆಂಗಳೂರು: ಜಯನಗರ ನಾಲ್ಕನೇ ಹಂತ­ದಲ್ಲಿ ವಿನಾಯಕ ಸೇವಾ ಸಮಿತಿ ನಿರ್ವಹಿಸುತ್ತಿದ್ದ ವಿನಾಯಕ ದೇವಾ­ಲ­ಯವನ್ನು ಮುಜರಾಯಿ ಇಲಾಖೆಯು ಶನಿವಾರ ವಶಕ್ಕೆ ಪಡೆದಿದೆ.ಸೇವಾ ಸಮಿತಿ ಸದಸ್ಯರು ದೇವಾ­ಲಯಕ್ಕೆ ಬರುವ ಭಕ್ತರೊಂದಿಗೆ ಸರಿ­ಯಾಗಿ ವರ್ತಿಸುತ್ತಿಲ್ಲ. ಅಲ್ಲದೆ, ದೇವಾ­ಲಯದ ನಿರ್ವಹಣೆಯೂ ಸಮರ್ಪ­ಕವಾಗಿ ಆಗುತ್ತಿಲ್ಲ ಎಂದು ಸ್ಥಳೀಯ ಭಕ್ತರು ಮುಜರಾಯಿ ಇಲಾಖೆಗೆ ಕೆಲ ತಿಂಗಳ ಹಿಂದೆ ದೂರು ನೀಡಿದ್ದರು.ಈ ದೂರಿನ ಆಧಾರದ ಮೇಲೆ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೇವಾಲಯದ ಹಣಕಾಸಿನ ಲೆಕ್ಕಪತ್ರ, ಚಿನ್ನಾಭರಣ ಮತ್ತಿತರ ವಸ್ತುಗಳ ಸಮ­ರ್ಪಕ ನಿರ್ವಹಣೆಯಲ್ಲಿ ಸೇವಾ ಸಮಿತಿ ವಿಫಲವಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು.ಸೇವಾ ಸಮಿತಿಯ ಮೇಲಿನ ಆರೋಪ­ಗಳು ಸತ್ಯವಾಗಿದ್ದು, ದೇವಾ­ಲ­ಯವನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯಬೇಕೆಂದು ಸಹಾಯಕ ಆಯುಕ್ತರು ಇಲಾಖೆಯ ಅಧೀನ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧಾರಿಸಿ ಇಲಾಖೆಯ ಅಧೀನ ಕಾರ್ಯದರ್ಶಿಯವರು ಜ.2ರಂದು ಆದೇಶ ಹೊರಡಿಸಿ, ದೇವಾಲಯವನ್ನು ಇಲಾಖೆಯ ವಶಕ್ಕೆ ಪಡೆಯಲು ನಿರ್ದೇಶನ ನೀಡಿದ್ದರು.ಆ ಆದೇಶದಂತೆ ನಗರ ವಿಶೇಷ ಜಿಲ್ಲಾಧಿಕಾರಿ ಶನಿವಾರ ದೇವಾ­ಲ­ಯವನ್ನು ಸರ್ಕಾರದ ವಶಕ್ಕೆ ಪಡೆದಿ­ದ್ದಾರೆ. ಸರ್ಕಾರದ ಈ ಕ್ರಮಕ್ಕೆ ಸ್ಥಳೀಯ ಭಕ್ತರು ಮುಜರಾಯಿ ಇಲಾಖೆ ಹಾಗೂ ವಿಶೇಷ ಜಿಲ್ಲಾಧಿ­ಕಾರಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry