ಬುಧವಾರ, ಜೂನ್ 23, 2021
22 °C

ದೇವಿಗೆ ಪೂಜೆ, ಹರಕೆ, ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ಕೋಟೆ ಮಾರಿಕಾಂಬಾ ಜಾತ್ರೆಯ ಎರಡನೇ ದಿನವಾದ ಬುಧವಾರವೂ ಸಹಸ್ರಾರು ಭಕ್ತರು ದೇವಿಗೆ ಪೂಜೆ, ಹರಕೆ, ಬಲಿ, ಸೇವೆ ಸಲ್ಲಿಸಿ ದರ್ಶನವನ್ನು ಪಡೆದರು.ಗಾಂಧಿಬಜಾರಿನ ಕೋಟೆ ರಸ್ತೆಯ ದೇವಳಕ್ಕೆ ಮಾರಿಕಾಂಬೆಯನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ಮುಂಜಾನೆ ಯಿಂದಲೇ ದೇವಳದ ಆವರಣದಲ್ಲಿ ಭಕ್ತರು ದೇವಿ ದರ್ಶನಕ್ಕೆ ನೆರೆದಿದ್ದರು. ಕೆಲ ಭಕ್ತರು ದೇವಿಗೆ ಕೋಳಿ ಬಲಿ ಕೊಡುವ ಮೂಲಕ ತಮ್ಮ ಹರಕೆ ತೀರಿಸಿದರೆ ಇನ್ನು ಕೆಲವರು ದೇವಿಗೆ ಬೇವಿನ ಸೇವೆ ಸಲ್ಲಿಸುವ ಮೂಲಕ ಹರಕೆ ಸಲ್ಲಿಸಿದರು.ಮಕ್ಕಳು, ಮಹಿಳೆಯರು ಹರಕೆ ರೂಪದಲ್ಲಿ ಬೇವಿನ ಉಡುಗೆ ತೊಟ್ಟು ದೇವಿ ದರ್ಶನ  ಪಡೆಯುತ್ತಿದ್ದರು. ಅಲ್ಲದೇ, ಜಾತ್ರೆ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆಗಳಲ್ಲಿ ಕುರಿ, ಕೋಳಿಗಳ ಬಲಿ ನೀಡಲಾಯಿತು.ವಿವಿಧ ಊರುಗಳಿಂದ ಬಂದ ನೆಂಟರು, ಅತಿಥಿಗಳಿಗೆ ಮನೆಗಳಲ್ಲಿ ವಿಶೇಷ ಔತಣ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಜಾತ್ರೆ ಹಿನ್ನೆಲೆಯಲ್ಲಿ ಕೋಟೆ ರಸ್ತೆಯ ಇಕ್ಕೆಲಗಳಲ್ಲಿ  ವಿಧ-ವಿಧವಾದ ಸಾಮಗ್ರಿ, ತಿಂಡಿ ತಿನಿಸುಗಳು, ಆಟದ ಸಾಮಾನುಗಳ ಮಾರಾಟ ಮಳಿಗೆಗಳು ತಲೆ ಎತ್ತಿದ್ದು, ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.