ದೇವಿಯ ಉಪಾಸನೆ ಇಂದಿನಿಂದ

7

ದೇವಿಯ ಉಪಾಸನೆ ಇಂದಿನಿಂದ

Published:
Updated:

ಶಿರಸಿ: ನಗರದ ಅಂಬಾಗಿರಿಯಲ್ಲಿ ಶರನ್ನವರಾತ್ರಿಯ ಭಾಗವಾಗಿ ಇದೇ 16ರಿಂದ ಒಂಬತ್ತು ದಿನ ದೇವಿಯ ಉಪಾಸನೆ ನಡೆಯಲಿದೆ.  ರಾಮಚಂದ್ರಾಪುರ ಮಠಾಧೀಶ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ `ಅಂಬಾಕಥಾ~ ವಿಶಿಷ್ಠ ಕಾರ್ಯಕ್ರಮ ನಿತ್ಯ ಸಂಜೆ 5ಗಂಟೆಯಿಂದ ಪ್ರಸ್ತುತಗೊಳ್ಳಲಿದೆ.150ಕ್ಕೂ ಹೆಚ್ಚು ಕಾರ್ಯಕರ್ತರು ಒಂದೂವರೆ ತಿಂಗಳಿನಿಂದ ದುಡಿದು ಕಾರ್ಯಕ್ರಮದ ಸಿದ್ಧತೆ ನಡೆಸಿದ್ದಾರೆ. 60್ಡ30 ಅಡಿ ವಿಸ್ತೀರ್ಣದ ಮುಖ್ಯ ವೇದಿಕೆಯಲ್ಲಿ ಶ್ರೀಗಳು ಆಸೀನರಾಗಿ ಪ್ರವಚನ ನೀಡುವರು. ಶ್ರೀಗಳ ಎಡಭಾಗದಲ್ಲಿ ಕಲಾವಿದರು ಕುಳಿತು ಗಾಯನ, ವಾದನ, ಚಿತ್ರಣದ ಮೂಲಕ ದೇವಿ ಉಪಾಸನೆ ಮಾಡುವರು. ಮುಖ್ಯ ವೇದಿಕೆ ಆವಾರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಹಸ್ರಾರು ಸುಮಂಗಲಿಯರಿಂದ ಕುಂಕುಮಾರ್ಚನೆ,ನಂತರ ಸೌಂದರ್ಯ ಲಹರಿ ಪಠಣ, ಕಾಳಿಕಾಮಠದ ಪಕ್ಕದಲ್ಲಿ ಒಂಬತ್ತು ದಿನಗಳ ಕಾಲ ನವಚಂಡೀಹವನ ನಡೆಯಲಿದ್ದು, ವಿಜಯ ದಶಮಿಯ ದಿನ ಚಂಡೀಹವನದ ಪೂರ್ಣಾಹುತಿಯಾಗಲಿದೆ. ನಿತ್ಯ ಸಂಜೆಯ ಕಾರ್ಯಕ್ರಮಕ್ಕೆ 5ಸಾವಿರ ಜನರ ನಿರೀಕ್ಷೆಯಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆಗೆ 3ಸಾವಿರ ಜನರನ್ನು ನಿರೀಕ್ಷಿಸಲಾಗಿದೆ. ಶಿರಸಿ ತಾಲ್ಲೂಕು ಮಾತ್ರವಲ್ಲದೆ, ಸಿದ್ದಾಪುರ, ಸಾಗರ, ಹರೀಶೆ, ಚಂದ್ರಗುತ್ತಿ, ಹೊಸನಗರ, ಕುಮಟಾ, ಹೊನ್ನಾವರ ಭಾಗಗಳಿಂದಲೂ ಜನರು ಆಗಮಿಸಲಿದ್ದಾರೆ.  ಶ್ರೀಗಳು ಭಾನುವಾರವೇ ಮಠಕ್ಕೆ ಆಗಮಿಸಿದ್ದು, ಮಠದ ಆವರಣದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ಇನ್ನಷ್ಟು ಉತ್ಸಾಹ, ಭಕ್ತಿಯಿಂದ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಮಠದ ಪ್ರಮುಖರಾದ ಪ್ರಮೋದ ಪಂಡಿತ, ವಿ.ಎಂ. ಹೆಗಡೆ ಮಾಹಿತಿ ನೀಡಿದರು.ವಿನೂತನ ಕಾರ್ಯಕ್ರಮ: ವೇದ ಸಮ್ಮತವಾಗಿ ಒಂಬತ್ತು ಕುಮಾರಿಯರಿಗೆ ಕನ್ಯಾ ಸಂಸ್ಕಾರ ಕೊಡುವ ವಿನೂತನ ಕಾರ್ಯಕ್ರಮ ಇದೇ 22ರಂದು ಅಂಬಾಗಿರಿಯ ರಾಮಕೃಷ್ಣಕಾಳಿಕಾ ಮಠದಲ್ಲಿ ಆಯೋಜನೆಗೊಂಡಿದೆ. ಕಳೆದು ಹೋದ ಸಂಸ್ಕಾರ ಮತ್ತೆ ನೀಡುವ ಈ ಕಾರ್ಯಕ್ರಮ ಇದೇ ಮೊದಲ ಬಾರಿಗೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry