ಮಂಗಳವಾರ, ಮೇ 11, 2021
25 °C

`ದೇವಿ ಮಹಾತ್ಮೆ' ನೃತ್ಯ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್. ನಗರ: ಪಟ್ಟಣದ ಪುರಸಭೆ ಬಯಲು ರಂಗಮಂದಿರದಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿ.ಎಸ್. ಮಾದಪ್ಪ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿಗಳು `ದೇವಿ ಮಹಾತ್ಮೆ' ನೃತ್ಯ ಪ್ರದರ್ಶಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.ಐಗಿರಿ ನಂದಿನಿ, ನಂದಿತ ಮೇದಿನಿ, ವಿಶ್ವ ವಿನೋದಿನಿ, ನಂದನುತೆ. ಗಿರಿವರ ವಿಂದ್ಯ ಶಿರೋದಿನಿ ವಾಸಿನಿ ವಿಷ್ಣು ವಿಲಾಸಿನಿ ವಿಷ್ಣನಿತೆ ಎಂಬ `ದೇವಿ ಮಹಾತ್ಮೆ' ಗೀತೆಯ ನೃತ್ಯ ಪ್ರದರ್ಶನದಲ್ಲಿ ಕೆ.ಪಿ. ಚಂದನ್, ಆರ್. ಅಮೂಲ್ಯ, ಮಾನಸಾ, ಮೇಘನಾ, ಯೋಗಿತಾ, ಕೃತಿಶ್ರೀ, ಎಂ.ಡಿ. ಸಹನಾ, ಪ್ರೀತಿ ನಟರಾಜ್, ಎಂ.ಆರ್. ಜೈಶ್ರೀ ಪಾಲ್ಗೊಂಡಿದರು.`ಶಕ್ತಿ ದೇವತೆ' ಗೀತೆಗೆ ಹಳದಿ ಬಣ್ಣದ ಸೀರೆ, ಕೈಯಲ್ಲಿ ತ್ರಿಶೂಲ ಹಿಡಿದು ಸಂಗಡಿಗರೊಂದಿಗೆ ಶಕ್ತಿ ದೇವತೆ ಅವತಾರದಲ್ಲಿ ಕಾಣಿಸಿಕೊಂಡ ಆರ್. ಅಮೂಲ್ಯ ಮತ್ತು ತಂಡದವರ ನೃತ್ಯ ಮೈನೋಜ್ಞವಾಗಿತ್ತು. ರಾಕ್ಷಸ ಸಂಹಾರ  ದೃಶ್ಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ ವೀಕ್ಷಕರಿಂದ ಚಪ್ಪಾಳೆ ಗಿಟ್ಟಿಸುವಲ್ಲಿ ತಂಡ ಯಶಸ್ವಿಯಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.