ದೇವೀಂದ್ರಪ್ಪ ಅಧ್ಯಕ್ಷ, ಗುರುಬಾಯಿ ಉಪಾಧ್ಯಕ್ಷೆ

7

ದೇವೀಂದ್ರಪ್ಪ ಅಧ್ಯಕ್ಷ, ಗುರುಬಾಯಿ ಉಪಾಧ್ಯಕ್ಷೆ

Published:
Updated:

ಸುರಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ದೇವಿಂದ್ರಪ್ಪ ಕಳ್ಳಿಮನಿ, ಉಪಾಧ್ಯಕ್ಷೆಯಾಗಿ ರಾಜೂಗೌಡ ಬಣದ ಗುರೂಬಾಯಿ ವಾಲಿ ಅವಿರೋಧವಾಗಿ ಆಯ್ಕೆಯಾದರು.  ಅಧ್ಯಕ್ಷ ಮತ್ತು ಉಪಾಧ್ಯಕ್ಷ  ಸ್ಥಾನಕ್ಕೆ ಕೇವಲ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಬಸವರಾಜ ಅಂಬರಶೆಟ್ಟಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು.  ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್ ಪಕ್ಷ ಬಹುಮತ ಹೊಂದಿದ್ದರೂ ತಮ್ಮಲ್ಲಿ ಈ ಮೀಸಲಾತಿಯ ಅಭ್ಯರ್ಥಿ ಇಲ್ಲದ್ದರಿಂದ ರಾಜೂಗೌಡ ಬಣಕ್ಕೆ ಉಪಾಧ್ಯಕ್ಷ ಸ್ಥಾನ ಒಲಿದು ಬಂತು.

  ಉಪಾಧ್ಯಕ್ಷ ಸ್ಥಾನ ತಮ್ಮ ಬಣಕ್ಕೆ ಲಭಿಸಿದ ಖುಷಿಯಲ್ಲಿದ್ದ ರಾಜೂಗೌಡ ಬೆಂಬಲಿತ 12 ಪುರಸಭೆ ಸದಸ್ಯರು ಮತ್ತು ಕಾರ್ಯಕರ್ತರು ನೂತನ ಉಪಾಧ್ಯಕ್ಷೆಯನ್ನು ಅಭಿನಂದಿಸಿದರು.ಪುರಸಭೆ ಮುಖ್ಯಾಧಿಕಾರಿ ಶಿವುಕುಮಾರಸ್ವಾಮಿ, ಶಿರಸ್ತೆದಾರ ಅಶೋಕ ಸುರಪುರಕರ್, ಪುರಸಭೆ ಸದಸ್ಯರಾದ ವೇಣು­ಮಾಧವ­ನಾಯಕ, ಮಲ್ಲಣ್ಣ ಐಕೂರ, ಪಾರಪ್ಪ ಗುತ್ತೇದಾರ, ವೆಂಕಟೇಶ ಹೊಸಮನಿ, ಜಯರಾಮನಾಯಕ, ಶೇಖ ಮಹಿಬೂಬ ಒಂಟಿ, ಭೀಮಾಶಂಕರ ಬಿಲ್ಲವ, ಅಪ್ಸರ ಹುಸೇನ ದಿಲದಾರ, ವೆಂಕಟೇಶ ಅಲ್ಟಿ, ಮನೋಹರ ಕುಂಟೋಜಿ, ಎಕ್ಬಾಲ ವರ್ತಿ ಮತ್ತಿತರರು ಇದ್ದರು.

 

­­ಆಯ್ಕೆ ಪ್ರಕ್ರಿಯೆಯ ನಂತರ ಹೊರಗೆ ಜಮಾಯಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ನಂತರ ಮೆರವಣಿಗೆಯಲ್ಲಿ ತೆರಳಿದ ನೂತನ ಅಧ್ಯಕ್ಷ ಗಾಂಧಿವೃತ್ತದಲ್ಲಿ ಮಹಾತ್ಮಾಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಕಾಂಗ್ರೆಸ್ ಕಚೇರಿಗೆ ತೆರಳಿ ಕಾಂಗೆ್ರಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.ಮೂಲಸೌಕರ್ಯಕ್ಕೆ ಆದ್ಯತೆ

ಕುಡಿವ ನೀರು, ಚರಂಡಿ, ರಸ್ತೆ, ಶೌಚಾಲಯ, ದೀಪ, ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತೇನೆ. ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಸಲಹೆ, ಸಹಕಾರದಿಂದ ಮಾಡುತ್ತೇನೆ. ಆಡಳಿತಕ್ಕೆ ಚುರುಕು ಮುಟ್ಟಿಸುತ್ತೇನೆ. ನಾಗರಿಕರ ಕೆಲಸ ಕಾರ್ಯಗಳನ್ನು ಸರಾಗವಾಗಿ ಆಗುವಂತೆ ನೋಡಿಕೊಳು್ಳತ್ತೇನೆ.

–ದೇವಿಂದ್ರಪ್ಪ ಕಳ್ಳಿಮನಿ, ಪುರಸಭೆ ನೂತನ ಅಧ್ಯಕ್ಷರುಸಮರ್ಪಕ ಆಡಳಿತದ ಗುರಿ

ಪುರಸಭೆ ಆಡಳಿತ ನಡೆಸಲು ಕಾಗ್ರೆ್ರಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾನೆ. ಸಮರ್ಪಕ ಆಡಳಿತದ ಗುರಿ ಹೊಂದಿದ್ದೇನೆ. ನಮ್ಮ ಪಕ್ಷದ ಸದಸ್ಯರು ಸಮರ್ಥರಾಗಿದ್ದಾರೆ. ಸಮಗ್ರ ಅಭಿವೃದ್ಧಿ ಮಾಡಿ ಮತದಾರ ಪ್ರಭುವಿನ ಋಣ ತೀರಿಸುತ್ತೇನೆ.

–ರಾಜಾ ವೆಂಕಟಪ್ಪನಾಯಕ, ಶಾಸಕರು, ಸುರಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry