ದೇವೇಂದ್ರಪ್ಪ ರಾಮದುರ್ಗ ಪುರಸಭೆ ಉಪಾಧ್ಯಕ್ಷ

7

ದೇವೇಂದ್ರಪ್ಪ ರಾಮದುರ್ಗ ಪುರಸಭೆ ಉಪಾಧ್ಯಕ್ಷ

Published:
Updated:

ರಾಮದುರ್ಗ: ಇಲ್ಲಿನ ಪುರಸಭೆ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ರಾಜಶೇಖರ ದೇವೇಂದ್ರಪ್ಪ ಶಲವಡಿ ಅವರು ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷರ ಆಯ್ಕೆಗಾಗಿ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹುಸೇನ್‌ಭಾಷಾ ಮೊರಬ ಮತ್ತು ರಾಜಶೇಖರ ಶಲವಡಿ ಅವರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಮತದಾನಕ್ಕೂ ಮುನ್ನ ಹಸೇನಭಾಷಾ ಮೊರಬ ಅವರು ತಮ್ಮ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರಿಂದ ರಾಜಶೇಖರ ಶಲವಡಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಶೀಲ್ದಾರ್ ಗೀತಾ ಕೌಲಗಿ ಪ್ರಕಟಿಸಿದರು.ಎಲ್ಲ ಸದಸ್ಯರು ಕಾಂಗ್ರೆಸ್ ಸದಸ್ಯರು ಚಪ್ಪಾಳೆ ತಟ್ಟಿ ಶಲವಡಿ ಅವರನ್ನು ಅಭಿನಂದಿಸಿದರು. ಪುರಸಭೆಯ ಕಾಮಗಾರಿಗಳನ್ನು ತಮ್ಮ ಸಂಬಂಧಿಕರಿಗೆ ನೀಡಿದ ಆರೋಪಕ್ಕೆ ಒಳಗಾಗಿ ಉಪಾಧ್ಯಕ್ಷ ಡಾ. ಕೆ. ಸಿ. ಪಾಟೀಲರ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರ ಸ್ಥಾನ ಖಾಲಿ ಉಳಿದಿತ್ತು.ಶಾಸಕ ಅಶೋಕ ಪಟ್ಟಣ, ಪುರಸಭೆ ಅಧ್ಯಕ್ಷ ಗೋವಿಂದ ಪತ್ತೇಪುರ, ಮುಖ್ಯಾಧಿಕಾರಿ ಶಶಿಧರ ಕಾಗವಾಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry