ದೇವೇಗೌಡರು ಕಣ್ಣೀರು ಸುರಿಸಬೇಕಿಲ್ಲ

ಸೋಮವಾರ, ಮೇ 20, 2019
30 °C

ದೇವೇಗೌಡರು ಕಣ್ಣೀರು ಸುರಿಸಬೇಕಿಲ್ಲ

Published:
Updated:

ದೇಶದ ಪರಿಸ್ಥಿತಿ ಕಂಡು ಮಾಜಿ ಪ್ರಧಾನಿ ದೇವೇಗೌಡರು ಮೊನ್ನೆ ಕಣ್ಣೀರು ಸುರಿಸಿದರು. ಅವರು ಕಣ್ಣೀರು ಸುರಿಸುವುದು ಬೇಕಿಲ್ಲ.ಅವರ ಕುಟುಂಬದ ಸದಸ್ಯರು ರಾಜಕೀಯದಿಂದ ಹೊರಬರಲಿ. ಅವರ ಇಬ್ಬರು ಪುತ್ರರು, ಒಬ್ಬ ಸೊಸೆ ಸಕ್ರಿಯ ರಾಜಕಾರಣಿಗಳು; ಮೇಲಾಗಿ ಗೌಡರೇ ಇನ್ನೂ ಸಕ್ರಿಯರು. ರಾಜಕೀಯವನ್ನು ಅವರು ಹಾಗೂ ಅವರ ಕುಟುಂಬ ಗುತ್ತಿಗೆ ಹಿಡಿದಿದ್ದಾರೆಯೇ?ಏಳೆಂಟು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಉದ್ಯಮಿ ಆರ್.ಎನ್. ಶೆಟ್ಟಿಯವರು ಜೆಡಿಎಸ್ ವತಿಯಿಂದ ಸಭೆ ಕರೆದಿದ್ದರು. ತರುಣರು ರಾಜಕೀಯಕ್ಕೆ ಬರಬೇಕು, ರಾಜ್ಯದ ಸೂತ್ರ ಹಿಡಿಯಬೇಕೆಂದು ಸಭೆಯಲ್ಲಿ ದೇವೇಗೌಡರು ಸಲಹೆ ನೀಡಿದ್ದರು. ಆಗ ಹೇಳಿದೆ- ನೀವು ಬಿಟ್ಟುಕೊಡಿ. ತರುಣರಿಗೆ ಅವಕಾಶ ಆಗುತ್ತದೆ ಎಂದು. ದೇವೇಗೌಡರು ಇನ್ನೂ ನಿವೃತ್ತಿಯಾಗಿಲ್ಲ. ಹೀಗಾಗಿ ಅವರು ದೇಶದ ಪರಿಸ್ಥಿತಿ ಕಂಡು ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry