ಮಂಗಳವಾರ, ಜೂನ್ 15, 2021
23 °C

ದೇವೇಗೌಡ ವಿರುದ್ಧ ಖಾದರ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಅಲ್ಪಸಂಖ್ಯಾತ ಸಮು ದಾಯದ ಬಗ್ಗೆ ದೇವೇಗೌಡ ಅವರು ಆಗಾಗ ಕನಿಕರ ತೋರಿಸುತ್ತಾರೆ. ಈ ಸಮುದಾಯದ ಬಗ್ಗೆ ನಿಜವಾದ ಕಾಳಜಿ ಅವರಿಗೆ ಇದ್ದಿದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಗೆ ಟಿಕೆಟ್‌ ನೀಡಬೇಕಾಗಿತ್ತು’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಲು ಬಯಸುತ್ತೇನೆ ಎನ್ನುವುದು ಸುಲಭ. ಆದರೆ, ಸಮುದಾಯದ ಅಭಿವೃದ್ಧಿಗೆ ನಿಜವಾಗಿ ಶ್ರಮಿಸಲು ಆಸಕ್ತಿ ಇರಬೇಕು. ಹಾಸನ, ಮಂಡ್ಯ ಇತರೆ ನಾಲ್ಕೈದು ಜಿಲ್ಲೆಗಳಲ್ಲಿ ಜೆಡಿಎಸ್‌ ಪರ ಒಲವಿದ್ದು, ಇಲ್ಲಿ ಪಕ್ಷ ಯಾವ ಅಭ್ಯರ್ಥಿಯನ್ನು ಇಳಿಸಿದರೂ ಗೆಲುವಿಗೆ ಹೆಚ್ಚು ಅವಕಾಶ ಇರುತ್ತದೆ. ಇಂಥ ಕ್ಷೇತ್ರಗಳಲ್ಲಿ ತಮ್ಮ ಕುಟುಂಬದವರು, ಸಂಬಂಧಿಕರಿಗೆ ಟಿಕೆಟ್‌ ನೀಡಿದ್ದಾರೆ. ಜೆಡಿಎಸ್‌ ಗೆಲುವು ಅಸಾಧ್ಯ ಎಂಬ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡುವ ಮೂಲಕ ಪರೋಕ್ಷ­­ವಾಗಿ ಬಿಜೆಪಿ ಗೆಲುವಿಗೆ ಅವಕಾಶ ಮಾಡಿ ಕೊಡು ತ್ತಾರೆ’ ಎಂದು ಖಾದರ್‌ ಟೀಕಿಸಿದರು.ಕಾಂಗ್ರೆಸ್‌ ಮುಖಂಡ ಜಾಫರ್‌ ಷರೀಫ್‌ ಅವರನ್ನು ಜೆಡಿಎಸ್‌ಗೆ ಸೆಳೆಯಲು ದೇವೇಗೌಡ ಅವರು ಪ್ರಯತ್ನಿಸುತ್ತಿ ರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಅದು ಅವಕಾಶ ವಾದಿ ಪಕ್ಷ. ಬೇರೆ ಪಕ್ಷಗಳಿಂದ ಅತೃಪ್ತರನ್ನು ತಮ್ಮತ್ತ ಸೆಳೆದೇ ಈ ಪಕ್ಷ ರಾಜಕೀಯ ಮಾಡಿದೆ. ಷರೀಫ್‌ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾಗಿದ್ದು, ಪಕ್ಷಕ್ಕೆ ಹಾನಿ ಉಂಟು ಮಾಡುವ ನಿರ್ಧಾರ ಕೈಗೊಳ್ಳ ಲಾ­ರರು. ಅವರು ಪಕ್ಷದಲ್ಲೇ ಉಳಿಯುತ್ತಾರೆ. ಜತೆಗೆ, ಪಕ್ಷ ಅವರಿಗೆ ಉನ್ನತ ಸ್ಥಾನ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದರು.‘ಮಾಜಿ ಪ್ರಧಾನಿ, ಹಿರಿಯ ಮುತ್ಸದ್ದಿ ಯಾಗಿ ರುವ ದೇವೇಗೌಡ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಮುಖ್ಯಮಂತ್ರಿಯಾಗಿ, ಪ್ರಧಾನಿ ಯಾ ಗಿದ್ದಾಗಲೂ ಸಾಧಿಸಲಾಗದ್ದನ್ನು ಇನ್ನು ಸಂಸದರಾಗಿ ಅವರು ಸಾಧಿಸಲಾರರು. ಆದ್ದರಿಂದ, ಅವರು ಚುನಾವಣೆಯಿಂದ ದೂರ ಸರಿದು, ಪ್ರಧಾನಿಗಿಂತ ಉನ್ನತ ಸ್ಥಾನ ಪಡೆಯುವ ಪ್ರಯತ್ನ ಮಾಡಬೇಕು’ ಎಂದರು.ಮೋದಿಯ ಹೆಸರೂ ಹೇಳದೆ ಅವರನ್ನು ಮತ್ತು ಬಿಜೆಪಿಯನ್ನು ಟೀಕಿಸಿದ ಖಾದರ್‌, ‘ಒಬ್ಬನೇ ವ್ಯಕ್ತಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಎಂಬುದು ಮೂರ್ಖತನವಾಗುತ್ತದೆ.ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸೇರಿ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕಾ­ಗುತ್ತದೆ. ರಾಜ್ಯ ಸರ್ಕಾರ ಹತ್ತು ತಿಂಗಳಲ್ಲಿ ಮಾಡಿರುವ ಸಾಧನೆಯನ್ನು ಜನರು ಗಮನಿಸಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದರು.ಪ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಗೌಡ, ಮುಖಂಡರಾದ ಝುಬೇದ್‌, ಮುಬಷೀರ್‌ ಅಹ್ಮದ್‌, ಅಮೀರ್‌ಜಾನ್‌ ಹಾಗೂ ಎಚ್‌.ಕೆ. ಮಹೇಶ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.