ಭಾನುವಾರ, ಜೂನ್ 20, 2021
21 °C

ದೇವೇಗೌಡ ವಿರುದ್ಧ ಸ್ಪರ್ಧೆಗೆ ಖೇಣಿ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: `ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ

ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದೇವೆಗೌಡರನ್ನು ಸೋಲಿಸುವುದೇ ನಮ್ಮ ಪಕ್ಷದ ಉದ್ದೇಶ~ ಎಂದು ಉದ್ಯಮಿ ಅಶೋಕ ಖೇಣಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಸನ ಜಿಲ್ಲೆ ಜನರಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಅವರನ್ನು ಸೋಲಿಸಿ ಬಡ ಜನತೆ ನಿರುಮ್ಮಳವಾಗಿ ಬದುಕುವಂತೆ ಮಾಡುವುದೇ ಕರ್ನಾಟಕ ಮಕ್ಕಳ ಪಕ್ಷದ ಮುಖ್ಯ ಗುರಿಯಾಗಿದೆ ಎಂದರು.ಅಲ್ಲಿಯ ಬಡಜನತೆ ದೇವೆಗೌಡರ ರಾಜಕೀಯ ತುಳಿತಕ್ಕೆ ಬಲಿಯಾಗಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಯವರೆಗೂ ಬಡ ಜನತೆಯನ್ನು ತುಳಿದು ಶ್ರೀಮಂತರಾಗಿದ್ದಾರೆ, ಅವರಿಗೆ ತಕ್ಕ ಪಾಠ ಕಲಿಸಬೇಕು. ದೇವೆಗೌಡರು ಚುನಾವಣೆಗೆ ಒಂದು ಕೋಟಿ ಖರ್ಚು ಮಾಡಿದರೆ ನಾನು 2 ಕೋಟಿ ರೂ ಖರ್ಚು ಮಾಡುತ್ತೇನೆ ಎಂದು ಸವಾಲು ಹಾಕಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಂಟಲ್‌ಮನ್, ಅನಿತಾ ಕುಮಾರಸ್ವಾಮಿ ಜಂಟಲ್ ಲೇಡಿ ಎಂದು ಖೇಣಿ ಹೇಳಿದರು. ಮತ್ತೆ ರಾಧಿಕಾ ಕುಮಾರಸ್ವಾಮಿ? ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅವಳು `ನೈಸ್ ಲೇಡಿ~ ಎಂದು ಪತ್ರಕರ್ತರನ್ನು ನಗೆಗಡಲಲ್ಲಿ ತೇಲಿಸಿದರು. ಮತ್ತೆ ನಮ್ಮ ನೈಸ್ ಕಂಪೆನಿಗೂ ಅದಕ್ಕೂ ಸಂಬಂಧ ಕಲ್ಪಿಸಬೇಡಿ ಎಂದು ಹೇಳುವುದನ್ನು ಮರೆಯಲಿಲ್ಲ.ಕುಮಾರಸ್ವಾಮಿ (ಜೆಡಿಎಸ್) ಅವರನ್ನು ಕರ್ನಾಟಕ ಮಕ್ಕಳ ಪಕ್ಷ ಬೆಂಬಲಿಸುತ್ತದೆ, ಆದರೆ ದೇವೇಗೌಡರಿಗೆ ಬೆಂಬಲವಿಲ್ಲ ಎಂದರು.ಮಕ್ಕಳ ಪಕ್ಷ ಉದ್ಘಾಟನೆ: ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಮೈದಾನದಲ್ಲಿ ಭಾನುವಾರ `ಕರ್ನಾಟಕ ಮಕ್ಕಳ ಪಕ್ಷ~ದ ಉದ್ಘಾಟನೆ ಮತ್ತು ಹಾವೇರಿ,ದಾವಣಗೆರೆ ಜ್ಲ್ಲಿಲೆಗಳ  ಕಾರ್ಯಕರ್ತರ ಸಮಾವೇಶ ನಡೆಯಿತು.ಇದನ್ನು ಖೇಣಿ ಉದ್ಘಾಟಿಸಿ ಮಾತನಾಡಿ ಭ್ರಷ್ಟ ಅಧಿಕಾರಿಗಳನ್ನು ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಕಡಿವಾಣ ಹಾಕುವುದೇ ನಮ್ಮ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದರು.ನನ್ನ ಮೇಲೆ 572 ಕೇಸು ಹಾಕಿದ್ದಾರೆ, ನನ್ನಂಥನಿಗೇ ಇಷ್ಟೊಂದು ತ್ರಾಸು ನೀಡುತ್ತಿದ್ದಾರೆ ಎಂದರೆ ಗ್ರಾಮೀಣ ಪ್ರದೇಶದ ಬಡ ಜನತೆ ಗತಿಯೇನು ಎಂದು ಖೇಣಿ ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.