ದೇಶಕ್ಕಾಗಿ ಆಡುವ ಆಸೆ ಕೈಬಿಟ್ಟಿಲ್ಲ

7

ದೇಶಕ್ಕಾಗಿ ಆಡುವ ಆಸೆ ಕೈಬಿಟ್ಟಿಲ್ಲ

Published:
Updated:

ಮುಂಬೈ (ಪಿಟಿಐ): ಸುಮಾರು ನಾಲ್ಕು ವರ್ಷಗಳಿಂದ ಆಯ್ಕೆಗಾರರ ಗಮನದಿಂದ ದೂರವಾಗಿ ಉಳಿದಿದ್ದರೂ ಅಜಿತ್ ಅಗರ್ಕರ್ ಅವರು `ದೇಶಕ್ಕಾಗಿ ಆಡುವ ಆಸೆ ಕೈಬಿಟ್ಟಿಲ್ಲ~ ಎಂದು ಹೇಳಿದ್ದಾರೆ.

ದೀರ್ಘ ಕಾಲದಿಂದ ಭಾರತ ಕ್ರಿಕೆಟ್ ತಂಡದಿಂದ ಹೊರಗೆ ಉಳಿದಿದ್ದರೂ ವಿಶ್ವಾಸ ಕಳೆದುಕೊಳ್ಳದ ಅವರು `ಮತ್ತೆ ಅವಕಾಶ ಸಿಗುತ್ತದೆ ಎನ್ನುವ ನಿರೀಕ್ಷೆ ನನ್ನದು. ನಾನು 19ನೇ ವಯಸ್ಸಿನಲ್ಲಿಯೇ ಪ್ರಥಮ ದರ್ಜೆಯ ಕ್ರಿಕೆಟ್ ಪ್ರವೇಶ ಮಾಡಿದ್ದು. ಆದ್ದರಿಂದ ಬಹಳ ಕಾಲ ನನ್ನನ್ನು ನೋಡಿದವರು ವಯಸ್ಸಾಯಿತೆಂದು ಭಾವಿಸು ತ್ತಾರೆ. ಆದರೆ ನಾನಿನ್ನೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಡಲು ದೈಹಿಕವಾಗಿ ಸಮರ್ಥನಾಗಿದ್ದೇನೆ~ ಎಂದರು.

ಫೆಬ್ರುವರಿ 22ರಿಂದ ಆರಂಭವಾಗಲಿರುವ ಪಶ್ಚಿಮ ವಲಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ತಂಡಕ್ಕೆ ನಾಯಕರಾಗಿರುವ 34 ವರ್ಷ ವಯಸ್ಸಿನ ವೇಗಿ ಅಗರ್ಕರ್ `ಆಡುವ ವಯಸ್ಸು ಕಳೆದು ಹೋಗಿಲ್ಲ. ಆಡುವ ಶಕ್ತಿಯೂ ಕುಗ್ಗಿಲ್ಲ~ ಎಂದು ವಿಶ್ವಾಸದಿಂದ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry