ಶನಿವಾರ, ಮಾರ್ಚ್ 6, 2021
18 °C
ಕ್ರೀಡಾಗ್ರಾಮಕ್ಕೆ ಬಂದಿಳಿದ ನರಸಿಂಗ್

ದೇಶಕ್ಕಾಗಿ ಪದಕ ಗೆಲ್ಲುವುದಷ್ಟೇ ನನ್ನ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶಕ್ಕಾಗಿ ಪದಕ ಗೆಲ್ಲುವುದಷ್ಟೇ ನನ್ನ ಗುರಿ

ರಿಯೊ ಡಿ ಜನೈರೊ (ಪಿಟಿಐ): ‘ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದಷ್ಟೇ ಈಗ ನನ್ನ ಮುಂದೆ ಇರುವ ಗುರಿ. ಆಗಿ ಹೋದ ಘಟನೆಯ ಬಗ್ಗೆ ಏನೂ ಕೇಳಬೇಡಿ’ ಎಂದು ಕುಸ್ತಿಪಟು ನರಸಿಂಗ್ ಯಾದವ್ ಹೇಳಿದ್ದಾರೆ.ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ನರಸಿಂಗ್ ಯಾದವ್ ಸಿಲುಕಿದ್ದರು. ನಾಡಾ ವಿಚಾರಣೆ ಎದು ರಿಸಿದ್ದ ನರಸಿಂಗ್ ಯಾದವ್ ನಂತರ ನಿರ್ದೋಷಿ ಎಂದು ಹೊರಹೊಮ್ಮಿ ದ್ದರು.   ಅವರು ತಮ್ಮ ಕೋಚ್ ಜಗ ಮಿಂದರ್ ಸಿಂಗ್ ಅವರೊಂದಿಗೆ ಗುರು ವಾರ ರಿಯೊಗೆ ಬಂದಿಳಿದಿದ್ದಾರೆ.

ಕ್ರೀಡಾಗ್ರಾಮಕ್ಕೆ ಬಂದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.‘ಭೂತಕಾಲದ ಬಗ್ಗೆ ಏನನ್ನೂ ಕೇಳಬೇಡಿರಿ. ಅದರ ಕುರಿತು ನಾನು ಎಂದಿಗೂ  ಆಲೋಚಿಸುವುದೂ ಇಲ್ಲ.  ನನ್ನ ತರಬೇತಿ ಮೇಲಷ್ಟೇ ಗಮನ ಹರಿಸಿದ್ದೇನೆ. ಆಗಸ್ಟ್ 19ರಂದು ನನ್ನ ಸ್ಪರ್ಧೆಯ ನಂತರವೇ ಮಾತನಾಡುತ್ತೇನೆ’ ಎಂದರು.

‘ಕ್ರೀಡಾಗ್ರಾಮ ಪ್ರವೇಶಿಸಿದ್ದು ಹೆಮ್ಮೆಯೆನಿಸುತ್ತಿದೆ.  ದೇಶಕ್ಕಾಗಿ ಒಂದು ಪದಕವನ್ನು ಗೆಲ್ಲುವುದು ನನ್ನ ಗುರಿ. ನನ್ನ ಸರ್ವಶಕ್ತಿಯನ್ನೂ ಪಣಕ್ಕೊಡ್ಡುತ್ತೇನೆ’ ಎಂದು ಉತ್ತರಪ್ರದೇಶದ ನರಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.ನಾಡಾ ನಿರ್ದೋಷಿ ಎಂದು ತೀರ್ಪು ನೀಡಿದ ನಂತರ ವಿಶ್ವ ಕುಸ್ತಿ ಫೆಡರೇಷನ್ ಅವರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅನುಮತಿ ನೀಡಿತ್ತು. ಆದರೆ ನಿಷೇಧಿತ ಉದ್ದೀಪನ ಮದ್ದು ಸೇವನೆ ಕುರಿತಂತೆ ವಾಡಾ ಇನ್ನೂ ಹಸಿರು ನಿಶಾನೆ ನೀಡಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.