ಶುಕ್ರವಾರ, ಮೇ 27, 2022
31 °C

ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ನಿಷ್ಠೆ, ಪ್ರಾಮಾಣಿಕತೆ, ಜಾತಿ ಮತ ಭೇದವಿಲ್ಲದೆ ದೇಶಕ್ಕಾಗಿ ಸಮರ್ಪಣಾ ಭಾವದ ಸೇವೆ ಸಲ್ಲಿಸಬೇಕು. ಆಗ ಮಾತ್ರ ಬದುಕು ಸಾರ್ಥಕ ಎಂದು ಐ.ಪಿ.ಎಸ್. ಅಧಿಕಾರಿ ಶಂಕರ ಬಿದರಿ ಹೇಳಿದರು.ನಗರದ ರಾಮೇಶ್ವರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ `ಆದರ್ಶ ಐ.ಪಿ.ಎಸ್. ಅಧಿಕಾರಿ  ಗಿರೆಪ್ಪ ವಿ. ಪಾಟೀಲ~ ಕುರಿತು ರಚಿಸಿದ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು.ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಡಬಾರದು. ನಿಸ್ವಾರ್ಥ ಸೇವೆ ಪ್ರತಿಯೊಬ್ಬ ಅಧಿಕಾರಿಯ ಆಶಯವಾಗಿರಬೇಕು. ದೇಶವನ್ನು ಕಾಪಾಡುವ ಮನೋಭಾವನೆ ಉನ್ನತ ಅಧಿಕಾರಿಗಳಲ್ಲಿ ಹಾಗೂ ರಾಜಕಾರಣಿಗಳಲ್ಲಿ ಬರಬೇಕು ಎಂದು ಹೇಳಿದರು.ನಾವು ಎಲ್ಲರೂ ಸಹೋದರರು ಎನ್ನುವ ಮನೋಭಾವನೆಯಿಂದ ಬದುಕಬೇಕು. ಉನ್ನತ ಸ್ಥಾನದಲ್ಲಿರುವವರು ಶಿಸ್ತು, ದಕ್ಷತೆ, ಪ್ರಾಮಾಣಿಕತೆ, ನಿಷ್ಠೆಯಿಂದ ದೇಶದ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.ಶಾಸಕ ಡಾ. ಎ.ಬಿ.ಮಾಲಕರೆಡ್ಡಿ ಮಾತನಾಡಿ, ಪ್ರಾಮಾಣಿಕತೆಗೆ ನಿವೃತ್ತ ಐ.ಪಿ.ಎಸ್. ಅಧಿಕಾರಿ ಗಿರೆಪ್ಪ ವಿ. ಪಾಟೀಲ ಉತ್ತಮ ನಿದರ್ಶನವಾಗಿದ್ದಾರೆ.  ತಮ್ಮ ಸೇವಾ ಅವಧಿಯಲ್ಲಿ ನಿಷ್ಠೆ, ಶಿಸ್ತು, ದಕ್ಷತೆಯಿಂದ ಕಾರ್ಯ ನಿರ್ವವಹಿಸಿದ್ದವರು. ಅಂತಹವರ ಕುರಿತು ಗ್ರಂಥ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಈ ಗ್ರಂಥ ಎಲ್ಲ ಜಿಲ್ಲಾ, ತಾಲ್ಲೂಕು ಗ್ರಂಥಾಲಯಗಳಿಗೆ ನೀಡಬೇಕು. ಅದಕ್ಕೆ ತಗಲುವ ವೆಚ್ಚವನ್ನು ತಾವು ನೀಡುವುದಾಗಿ ಹೇಳಿದರು.ಗ್ರಂಥಾಲಯ ಮತ್ತು ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಸಕರಾದ ಸುಭಾಷ ಆರ್. ಗುತ್ತೇದಾರ,  ಶಶೀಲ್ ಜಿ. ನಮೋಶಿ, ಶಾಸಕಿ ಅರುಣಾ ಸಿ. ಪಾಟೀಲ ಕಾರ್ಯಕ್ರಮದಲ್ಲಿ ಇದ್ದರು.ನಿವೃತ್ತ ಐ.ಪಿ.ಎಸ್. ಅಧಿಕಾರಿ ಗಿರೆಪ್ಪ ವಿ. ಪಾಟೀಲ, ಗ್ರಂಥ ಲೇಖಕರಾದ ಡಾ. ಈಶ್ವರಯ್ಯ ಮಠ, ಸುನೀತಾ ಸುಭಾಷ ಪಾಟೀಲ ಉಪಸ್ಥಿತರಿದ್ದರು. ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಗ್ರಂಥ ಪರಿಚಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.