ಬುಧವಾರ, ನವೆಂಬರ್ 20, 2019
22 °C

`ದೇಶಕ್ಕೆ ಜಗಜೀವನರಾಮ್ ಕಾಣಿಕೆ ಮಹತ್ವದ್ದು'

Published:
Updated:

ಬನಹಟ್ಟಿ: ಬಾಬು ಜಗಜೀವನರಾಮ್ ಅಪ್ರತಿಮ ರಾಜಕಾರಣಿಯಾಗಿದ್ದರು. ಅವರು ಕೇಂದ್ರ ಸಚಿವರಾಗಿ ಹಲವಾರು ಖಾತೆಗಳನ್ನು ನಿರ್ವಹಿಸಿದವರು. ರಕ್ಷಣಾ ಸಚಿವರಾಗಿ ಮತ್ತು ಕೇಂದ್ರ ಕೃಷಿ ಸಚಿವರಾಗಿಯೂ ಅವರು ಕಾರ್ಯನಿರ್ವಹಿಸಿದ್ದು ಈ ಸಂದರ್ಭದಲ್ಲಿ ಅವರು ಹಸಿರು ಕ್ರಾಂತಿಯ ಸಲುವಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ಅಷ್ಟೇ ಅಲ್ಲ ಅವರು ಈ ದೇಶದ ಉಪಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದರು ಎಂದು ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ಆರ್. ಎಮ್. ಕೊಡುಗೆ ಹೇಳಿದರು.ಶುಕ್ರವಾರ. ರಬಕವಿ ಬನಹಟ್ಟಿ ನಗರಸಭೆಯ ಕಾರ್ಯಾಲಯದಲ್ಲಿ ಬಾಬು ಜಗಜೀವನರಾಮ್ ಅವರ 106ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಅವರುಮಾತನಾಡಿದರು.ಬಿಹಾರದ ಒಂದು ದಲಿತ ಕುಟುಂಬದಿಂದ ಬಂದು, ವಿದ್ಯಾವಂತರಾಗಿ, ರಾಜಕಾರಣಿಯಾಗಿ, ಸಮಾಜ ಸುಧಾರಕರಾಗಿ ಅವರು ಮಾಡಿದ ಕಾರ್ಯಗಳು ಮಹತ್ವವಾದವುಗಳು. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು ಎಂದು ಕೊಡುಗೆ ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳಾದ ಗೋಪಾಲೆ ಕಾಸೆ, ವ್ಯವಸ್ಥಾಪಕ  ಶಿವಾನಂದ ಅಂಬಿಗೇರ, ಆರ್.ಐ. ಪಾಟೀಲ ಸೇರಿದಂತೆ ನಗರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)