ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ನಿರಂತರ ಏರಿಕೆ

7

ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ನಿರಂತರ ಏರಿಕೆ

Published:
Updated:

ನವದೆಹಲಿ (ಐಎಎನ್‌ಎಸ್): ದೇಶದಲ್ಲಿ 1953ರಿಂದ 2011ರ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇಕಡಾ 873ರಷ್ಟು ಏರಿಕೆಯಾಗಿದೆ ಎಂದು ಸಿಪಿಎಂ ತನ್ನ `ಪೀಪಲ್ಸ್ ಡೆಮಾಕ್ರಸಿ' ಪತ್ರಿಕೆಯ ಇತ್ತೀಚಿನ ಆವೃತ್ತಿಯಲ್ಲಿ ಹೇಳಿದೆ.


`ಜಿ- 20 ದೇಶಗಳ ಪೈಕಿ ಭಾರತ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಕೆಟ್ಟ ಸ್ಥಳವಾಗಿದೆ' ಎಂಬ `ಗಾರ್ಡಿಯನ್' ಪತ್ರಿಕೆಯ ಹೇಳಿಕೆಯನ್ನು ಉಲ್ಲೇಖಿಸಿರುವ `ಪೀಪಲ್ಸ್ ಡೆಮಾಕ್ರಸಿ', ದೇಶದಾದ್ಯಂತ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳು ಎಚ್ಚರಿಕೆಯ ಗಂಟೆಯಾಗಿದೆ ಎಂದಿದೆ.

 

`ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ'(ಎನ್‌ಸಿಆರ್‌ಬಿ) ನೀಡಿರುವ ಅಂಕಿ ಅಂಶಗಳ ಪ್ರಕಾರ, ಶೇ 873ಕ್ಕೆ ಏರಿಕೆಯಾಗಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಈ ಮೊದಲಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೆ, 2007-2011ರಲ್ಲಿ ಅತ್ಯಾಚಾರಗಳ ಪ್ರಮಾಣ ಶೇ 9.7 ಹೆಚ್ಚಾಗಿದೆ.

 

2007ರಿಂದ 2011ರ ಅವಧಿಯಲ್ಲಿ ದೆಹಲಿಯಲ್ಲಿ 2,620, ಮುಂಬೈನಲ್ಲಿ 1,033, ಬೆಂಗಳೂರಿನಲ್ಲಿ 383, ಚೆನ್ನೈನಲ್ಲಿ 293 ಹಾಗೂ ಕೋಲ್ಕತ್ತದಲ್ಲಿ 200 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

 

ದೆಹಲಿಯಲ್ಲಿ ಅತ್ಯಾಚಾರ ವಿರುದ್ಧ 2002ರಿಂದ 2011 ನಡುವೆ ದಾಖಲಾಗಿರುವ ಪ್ರತಿ ನಾಲ್ಕು ಪ್ರಕರಣಗಳ ಪೈಕಿ ಮೂರರಲ್ಲಿ ಆರೋಪಿಗಳು ಶಿಕ್ಷೆ ಪಡೆಯಲಿಲ್ಲ.

 

ಕಳೆದ ಒಂದು ದಶಕದಲ್ಲಿ ದಾಖಲಾದ 5,337 ಪ್ರಕರಣಗಳ ಪೈಕಿ 3,860ರಲ್ಲಿ ಆರೋಪಿಗಳು ಖುಲಾಸೆ ಅಥವಾ ಸೂಕ್ತ ಸಾಕ್ಷ್ಯಗಳ ಕೊರತೆಯಿಂದ ನ್ಯಾಯಾಲಯಗಳಿಂದ ಬಿಡುಗಡೆ ಹೊಂದಿದ್ದಾರೆ. ಅಲ್ಲದೆ, ದೇಶದಲ್ಲಿ 2001ರಿಂದ 2010ರವರೆಗೆ ದಾಖಲಾಗಿರುವ ವಿವಿಧ ಅಪರಾಧ ಪ್ರಕರಣಗಳ ಪೈಕಿ ಅತ್ಯಾಚಾರ ಪ್ರಕರಣಗಳ ಪಾಲು ಶೇಕಡಾ 26 ಆಗಿದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ತಿಳಿಸಿವೆ.

 

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ ಎರಡು ವರ್ಷ ಜೈಲು


ಚೆನ್ನೈ:  ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಐದು ವರ್ಷಗಳ ಹೋರಾಟದ ನಂತರ ನ್ಯಾಯ ಸಿಕ್ಕಿದ್ದು. ತಿರುವಳ್ಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿ ಶಿಕ್ಷಕನಿಗೆ   2 ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ದಂಡವನ್ನು ವಿಧಿಸಿದೆ. 

 


ಶಿಕ್ಷೆಗೆ ಒಳಗಾಗಿರುವ ಶಿಕ್ಷಕ  ಪಳನಿಸ್ವಾಮಿ ಖಾಸಗಿ ಶಾಲೆಯಲ್ಲಿ ಭೌತಶಾಸ್ತ್ರ ಬೋಧಿಸುತ್ತಿದ್ದು 2006-07ರ ಅವಧಿಯಲ್ಲಿ  ಭೌತಶಾಸ್ತ್ರ ಪ್ರಯೋಗಾಲಯದಲ್ಲಿ  ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಈತನ ಮೇಲಿತ್ತು.


ದೂರು  ವಾಪಸ್ ಪಡೆಯುವಂತೆ  ಒತ್ತಡ ಹಾಗೂ ಬೆದರಿಕೆಯನ್ನು ಹಾಕಲಾಗಿತ್ತು. 


 


 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry