ಸೋಮವಾರ, ಮೇ 23, 2022
30 °C

ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದಲ್ಲಿ ಉದ್ಯೋಗವಕಾಶಗಳು ಹೆಚ್ಚುತ್ತಿದ್ದು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಪರಿಣಾಮಕಾರಿ ಕಾರ್ಯಗಳು ನಡೆಯಬೇಕಿದೆ’ ಎಂದು ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಟಿ.ಎ.ಮೋಹನದಾಸ್ ಪೈ ಕರೆ ನೀಡಿದರು.ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಭಾರತದಲ್ಲಿ ಮಾನವ ಸಂಪನ್ಮೂಲದ ತುರ್ತುಪರಿಸ್ಥಿತಿ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿರುವಂತೆ ಭಾರತದ ಮಾನವ ಸಂಪನ್ಮೂಲ ಕ್ಷೇತ್ರ ಹೆಚ್ಚು ವಿಶ್ವವ್ಯಾಪಿಯಾಗಿದೆ. ಬೌದ್ಧಿಕ ಬಂಡವಾಳವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ಷೇತ್ರ ಶ್ರಮಿಸಬೇಕಿದೆ’ ಎಂದರು.ಬಾಷ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ವಿಶ್ವನಾಥನ್ ಮಾತನಾಡಿ ‘ಕುಶಲಕರ್ಮಿಗಳ ಲಭ್ಯತೆ ಮತ್ತು ಅವರ ನಿರ್ವಹಣೆ ಸವಾಲಿನ ಸಂಗತಿಯಾಗಿದೆ. ದೇಶದಲ್ಲಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಮಾನವ ಸಂಪನ್ಮೂಲವನ್ನು ಕೂಡ ಹೆಚ್ಚಿಸಬೇಕಿದೆ’ ಎಂದರು.‘ಪ್ರತಿಭೆಗಳ ನಿರ್ವಹಣೆ, ಉದ್ಯೋಗಿಗಳ ನಿರ್ವಹಣೆ ಹಾಗೂ ಕೌಶಲ್ಯ ಅಭಿವೃದ್ಧಿ ಏಕಕಾಲಕ್ಕೆ ನಡೆದರೆ ಒಂದು ಸಂಸ್ಥೆ ಸಂಪದ್ಭರಿತವಾಗಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸಂಸ್ಥೆಗಳು ಗಮನ ಹರಿಸಬೇಕಿದೆ’ ಎಂದರು.ಆಕ್ಸೆಂಚರ್ ಸರ್ವೀಸಸ್ ಅಧ್ಯಕ್ಷ ಹರ್ಷ ಮಾಂಗ್ಲೀಕ್ ಮಾತನಾಡಿ ‘ದೇಶದ ಜನಸಂಖ್ಯೆಯಲ್ಲಿರುವ ಯುವಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕಿದೆ. ಮೌಲ್ಯಗಳನ್ನು ಸೃಷ್ಟಿಸುವ, ವ್ಯವಹಾರಗಳನ್ನು ನಿಭಾಯಿಸುವ ಗುಣ ಎಲ್ಲರೊಳಗೂ ಇರುತ್ತದೆ. ಇದನ್ನು ಗುರುತಿಸುವ ಶಕ್ತಿಯನ್ನು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿರುವವರು ಪಡೆಯಬೇಕು’ ಎಂದರು.ಸಿಐಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಅರೂನ್ ರಾಮನ್, ಉಪಾಧ್ಯಕ್ಷ ಎಸ್.ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.