ದೇಶದ ಪ್ರಗತಿಗೆ ಜನಗಣತಿ ಪೂರಕ: ತಹಶೀಲ್ದಾರ್

7

ದೇಶದ ಪ್ರಗತಿಗೆ ಜನಗಣತಿ ಪೂರಕ: ತಹಶೀಲ್ದಾರ್

Published:
Updated:

ಮಾಗಡಿ:  ಜನಗಣತಿ ದೇಶದ ಪ್ರಗತಿಗೆ ಪೂರಕವಾಗಲಿದೆ. ಗಣತಿದಾರರು ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಜನತೆಯೊಡನೆ ಸೌಮ್ಯದಿಂದ ನಡೆದುಕೊಂಡು, ಗಣತಿ ಕಾರ್ಯ ದೇಶ ಸೇವೆ ಎಂದು ಪ್ರಾಮಾಣಿಕವಾಗಿ ಸತ್ಯ ಸಂಗತಿಗಳನ್ನು ಸಂಗ್ರಹಿಸುವಂತೆ  ತಹಶೀಲ್ದಾರ್ ವಿ. ನಾಗರಾಜ ತಿಳಿಸಿದರು.ತಾಲ್ಲೂಕಿನ ಗ್ರಾ.ಪಂ. ಕೇಂದ್ರವಾದ  ಬಾಚೇನಹಟ್ಟಿ ಗ್ರಾ.ಪಂ, ಸದಸ್ಯೆ ವೆಂಕಟಲಕ್ಷ್ಮಮ್ಮಕೋಡಪ್ಪ ಮನೆಯಂಗಳದಲ್ಲಿ ಜನಗಣತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜನಗಣತಿ ಇಂದಿನಿಂದ ಫೆ.28 ರವರೆಗೆ ನಡೆಯಲಿದೆ. ಜನತೆ ಗಣತಿದಾರರಿಗೆ ತಮ್ಮ ಮಾಹಿತಿ ನೀಡಿ ಸಹಕರಿಸುವಂತೆ ತಹಶೀಲ್ದಾರರು ಮನವಿ ಮಾಡಿದರು.ಜಿ.ಪಂ. ಸದಸ್ಯ ಕೆ. ಮುದ್ದುರಾಜ್ ಯಾದವ್ ಜನಗಣತಿಮಹತ್ವ ಕುರಿತು ಮಾತನಾಡಿದರು.ತಾ.ಪಂ. ಮಾಜಿ ಅಧ್ಯಕ್ಷೆ ಸವಿತಾ ಎಂ. ರಾಜ್, ಗ್ರಾ.ಪಂ. ಸದಸ್ಯರಾದ ಬಿ.ಜಿ.ಶಿವಮೂರ್ತಿ, ಬಾಳೇಗೌಡ, ಮಾರುತಿ, ನರಸಿಂಹಮೂರ್ತಿ, ರಂಗನಾಥ್, ಕಂದಾಯ ಅಧಿಕಾರಿ ಹನುಮಂತರಾಯಪ್ಪ, ಗಣತಿ ಮೇಲ್ವಿಚಾರಕರಾದ  ಮಹಾಲಕ್ಷ್ಮಮ್ಮ, ರವಿಶಂಕರ್, ಗಣತಿದಾರರಾದನೀಲಮ್ಮ, ಸರಸ್ವತಿ, ಆನಂದಮೂರ್ತಿ, ಹೊಸಪೇಟೆ ನಾರಾಯಣಪ್ಪ ಹಾಗೂ ಗ್ರಾಮಸ್ಥರು ಇದ್ದರು. ಪಟ್ಟಣದ ಕೋಟೆ ರಾಮೇಶ್ವರ ನಗರದ ನಿವೃತ್ತ ಶಿಕ್ಷಕಿ ಸಿ.ಧನಭಾಗ್ಯಮ್ಮ, ಛಾಯಾದೇವಿ, ಶ್ವೇತಗಣೇಶ್ ಮನೆಯಂಗಳದಲ್ಲಿ ಗಣತಿದಾರ ಜಿ. ರಾಮಕೃಷ್ಣಯ್ಯ ಹಾಗೂ ಬಿ.ಎಂ.ಪದ್ಮನಾಭ ಗಣತಿಕಾರ್ಯ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry