ಶುಕ್ರವಾರ, ಜೂನ್ 25, 2021
27 °C

ದೇಶದ ಪ್ರಗತಿಗೆ ಶಿಕ್ಷಣ ಪೂರಕ: ಹೊಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಸೂಗೂರೇಶ್ವರ ಶಿಕ್ಷಣ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಶಾರದಾ ಶಿಶು ವಿದ್ಯಾಮಂದಿರ ಪೂರ್ವ ಮತ್ತು ಶಾರದಾ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಈಚೆಗೆ ನಡೆಯಿತು.ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ, ಗ್ರಾಮೀಣ ಭಾಗದಲ್ಲಿ ಈ ಸಂಸ್ಥೆಯಿಂದ ಉತ್ತಮ ಶಿಕ್ಷಣ ದೊರೆಯುತ್ತಿದೆ. ಇದ­ರಿಂದ ದೂರದ ನಗರಕ್ಕೆ ಹೋಗಿ ಕಲಿ­ಯುವ ಮಕ್ಕಳಿಗೆ ಸ್ಥಳೀಯ ಪ್ರದೇಶ­ದಲ್ಲಿ ಗುಣಾತ್ಮಕ ಶಿಕ್ಷಣ ದೊರೆಯು­ವಂತಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂದರು.ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರಿಗೆ ಮುಖ್ಯವಾಗಿದೆ. ಇದ­ರಿಂದ ಆರ್ಥಿಕ, ಸಾಮಾಜಿಕ ಹಾಗೂ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ. ಈ ರೀತಿಯ ಕಾರ್ಯದಲ್ಲಿ ತೊಡಗಿಸಿ­ಕೊಂಡ ಸೂಗೂರೇಶ್ವರ ಶಿಕ್ಷಣ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮಲ್ಲಣ್ಣಗೌಡ ಮಾಲಿಪಾಟೀಲ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸಹಕಾರವಿದೆ. ಸಾಕಷ್ಟು ಮಕ್ಕಳು ಈಗಾಗಲೇ ಶಾಲೆ­ಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದ­ರಿಂದ ಈ ಭಾಗದ ಜನತೆಗೆ ಅನು­ಕೂಲವಾಗಿದೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಸೂಗೂರೇಶ್ವರ ಶಿಕ್ಷಣ ಮತ್ತು ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಸೂಗುರೇಶ್ವರ ಶಿವಾಚಾ­ರ್ಯ ಮಾತನಾಡಿ, ಶಾಲಾ ಸಿಬ್ಬಂದಿ ಸೇವಾ ಮನೋಭಾವದಿಂದ ಕೆಲಸ ಮಾಡಿ­ದಾಗ ತೊಂದರೆಗಳು ಬರುವುದಿಲ್ಲ. ಉತ್ತಮ ಕಾರ್ಯಗಳಿಗೆ ಎಲ್ಲರ ಸಹ­ಕಾರವಿರುತ್ತದೆ. ಗುಣಮಟ್ಟದ ಶಿಕ್ಷಣ­ಕ್ಕಾಗಿ ಶಿಕ್ಷಕರು ಉತ್ತಮ ಬೋಧನೆ­ಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ನಿವೃತ್ತಿ ಹೊಂದಿದ ರಾಚೋಟಿ­ಸ್ವಾಮಿ ಎಣ್ಣಿ, ಭೀಮರಡ್ಡಿ ಸಾಹು ಗಡೇದ ಯಡ್ಡಳ್ಳಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ­ಕ್ರಮಗಳು ಜರುಗಿದವು. ಶರಣಗೌಡ ಪೊಲೀಸ್‌ಪಾಟೀಲ ಯಡ್ಡಳ್ಳಿ, ಶರಣಪ್ಪ ಸಾಹು ಗಡೇದ ಜಗದೀಶ ಶರಣರು ನಗನೂರ, ಸಂಗನಬಸವಯ್ಯ ಕೊಡೇ­ಕಲ್ಮಠ, ಗ್ರಾಮಸ್ಥರು, ಶಾಲಾ ಮಕ್ಕಳು ಹಾಜರಿದ್ದರು.ಸಂಸ್ಥೆಯ ಕಾರ್ಯದರ್ಶಿ ಜಗದೀ­ಶ್ವರ ಮೇಲಿನಮಠ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಜ್ಯೋತಿ ಮೇಲಿನಮಠ ವರದಿ ವಾಚನ ಮಾಡಿದರು. ಶರಣು ಗಡೇದ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.