`ದೇಶದ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ'

7

`ದೇಶದ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ'

Published:
Updated:

ಸಿಂದಗಿ: ಶಿಕ್ಷಕ ವ್ಯಕ್ತಿಯಲ್ಲ, ಶಕ್ತಿ. ದೇಶದ ಭವಿಷ್ಯ ನಿರ್ಮಾಣ ದಲ್ಲಿ ಶಿಕ್ಷಕರ ಪಾತ್ರ ಅಗಾಧವಾದುದು ಎಂದು ಸ್ಥಳೀಯ ಅಂಜುಮನ್ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಡಿ. ಬಳಗಾನೂರ ಹೇಳಿದರು.ಗುರುವಾರ ನಗರದ ಆರ್.ಡಿ.ಪಾಟೀಲ ಪಿಯು ಕಾಲೇಜಿ ನಲ್ಲಿ ಲಯನ್ಸ್ ಕ್ಲಬ್ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ವೈಚಾರಿಕ ಜಗ್ಗಾಟದಲ್ಲಿ ಶಿಕ್ಷಣ ಇಂದು ನರಳುತ್ತಿದೆ. ಶಿಕ್ಷಣದಲ್ಲಿ ಎಡಪಂಥೀಯ, ಬಲಪಂಥೀಯ ಎಂಬ ವಿಚಾರ ಧಾರೆಗಳು ಹುಟ್ಟಿಕೊಂಡು ಮತಾಂಧತೆ, ದ್ವೇಷ, ಅಸೂಯೆ, ನಾಸ್ತಿಕತೆ, ನೈತಿಕ ಅಧ:ಪತನ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದು ವಿಷಾದಿಸಿದರು.ಇದೇ ಸಂದರ್ಭದಲ್ಲಿ ಆದರ್ಶ ಶಿಕ್ಷಕರೆಂದು ಆಲಮೇಲ ಎ.ಕೆ.ನಂದಿ ಪಿಯು ಕಾಲೇಜು ಅಧ್ಯಾಪಕ ಜಿ.ವೈ.ಬಿರಾದಾರ, ಅಸ್ಕಿ ಸರ್ಕಾರಿ ಪ್ರೌಢಶಾಲೆ ಅಧ್ಯಾಪಕ ಗುಂಡಪ್ಪ ಧನಪಾಲ, ಆಲಮೇಲ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ವಿ.ಸಲಗೊಂಡ, ಚಾಂದಕವಠೆ ಶಾಲೆ ಶಿಕ್ಷಕ ಬಸಪ್ಪ ಹಿಟ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಗಣಪತಿ ನಾಯಿಕ ಮುಖ್ಯ ಅತಿಥಿಗಳಾಗಿದ್ದರು. ಪ್ರಭು ಸಾರಂಗದೇವ ಶಿವಾ ಚಾರ್ಯರು ಸಾನಿಧ್ಯ ವಹಿಸಿದ್ದರು. ಲಯನ್ಸ್ ಕ್ಲಬ್ ಖಜಾಂಚಿ ನೆಹರೂ ಪೋರವಾಲ, ಪ್ರಾಚಾರ್ಯ ಆರ್.ಎಂ.ಬಿರಾದಾರ ವೇದಿಕೆಯಲ್ಲಿದ್ದರು. ವಿಶ್ರಾಂತ ಪ್ರಾಚಾರ್ಯ ಎಂ.ವಿ.ಗಣಾಚಾರಿ ಉಪನ್ಯಾಸ ನೀಡಿದರು.ಪ್ರೊ.ಎಸ್.ಎಸ್.ಪಾಟೀಲ ಸ್ವಾಗತಿಸಿದರು. ಲಾಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಐ.ಬಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರ್ಥಿಗಳಿಂದಲೇ ಆಚರಣೆ

ಸಿಂದಗಿ:
ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳ ಬೇಕಾದ ದುರದೃಷ್ಟಕರ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮುಂದಾಗಿ ಶಿಕ್ಷಕರ ದಿನಾಚರಣೆ ಆಚರಿಸುವುದರ ಜೊತೆಗೆ ಗುರು ಕಾಣಿಕೆ ನೀಡಿದ ಅಪರೂಪದ ಕಾರ್ಯಕ್ರಮ ಸಿಂದಗಿ ನಗರದಲ್ಲಿ ಗುರುವಾರ ನಡೆಯಿತು.ಸ್ಥಳೀಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪದವಿ ಪೂರ್ವ ಕಾಲೇಜ್‌ನಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಅಚ್ಚು ಕಟ್ಟಾಗಿ, ಅರ್ಥಪೂರ್ಣವಾಗಿ ಆಚರಿಸಿದರು.ವಿದ್ಯಾರ್ಥಿನಿಯರಾದ ಡಿ.ಬಿ.ಶೇಖ, ಎಚ್.ಡಿ.ಭಾಲ್ಕಿ, ಬಿ. ಯು.ನಾಟೀಕಾರ, ಪಿ.ಬಿ.ನಧಾಪ, ಎ.ಐ.ಪೂಲಮಾಲೆ, ಮುಲ್ಲಾ ಹಾಗೂ ವಿದ್ಯಾರ್ಥಿ ಎಂ.ಎಂ.ಮಲಘಾಣ ಇವರು ಶಿಕ್ಷಕರ ಗುಣಗಾನ ಮಾಡಿದರು. ಜೊತೆಗೆ ಶಿಕ್ಷಕರನ್ನು ಕುರಿತಾಗಿ ಹಾಡಿ ಹರಿಸಿದರು. ಅಲ್ಲದೇ ಶಿಕ್ಷಕರಿಗೆ ಗುರು ಕಾಣಿಕೆ ನೀಡಿ ಋಣ ತೀರಿಸಿದರು. ಉಪನ್ಯಾಸಕರಾದ ರಾ.ಶಿ.ವಾಡೇದ, ಬಿ.ಎಂ.ಬುದನೂರ, ಎ.ಎ.ಸಾಲೋಡಗಿ, ಎಸ್.ಎಂ. ನಾಯ್ಕೋಡಿ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು. ಪ್ರಾಚಾರ್ಯ ಎಂ.ಡಿ.ಬಳಗಾ ನೂರ  ಮಾತನಾಡಿದರು. ಸಿ.ಎಂ.ಕೋರಬು ಕುರಾನ ಪಠಣ ಮಾಡಿದರು. ವಿದ್ಯಾರ್ಥಿ ಎಂ.ಎಸ್.ಜಂಬಗಿ ಕಾರ್ಯಕ್ರಮ ನಿರೂಪಿಸಿದರು.ಡಾ.ಅಂಗಡಿ ಕಾಲೇಜು

ತಾಳಿಕೋಟಿ
: ಇಲ್ಲಿನ ಡಾ.ಎಸ್.ಎಸ್.ಅಂಗಡಿ ಪ್ರೌಢಶಾಲೆ: ಸ್ಥಳೀಯ ಸ್ಪರ್ಧಾ ವಿಜಯ ಎಜ್ಯುಕೇಶನ್ ಸೊಸೈಟಿಯ ಡಾ.ಎಸ್.ಎಸ್. ಅಂಗಡಿ ಪ್ರೌಢಶಾಲೆಯಲ್ಲಿ ಗುರುವೃಂದ ಶಿಕ್ಷಕ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಚಾರ್ಯ ಡಿ.ಎಂ. ಧನ್ನೂರ, ಪ್ರೊ.ಎಚ್.ಬಿ.ಪಡಗಾನೂರ, ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಸ್.ಅಂಗಡಿ ಮಾತನಾಡಿದರು. ರಾಜೇಶ್ವರಿ ಬಂದಾಳ ಪ್ರಾರ್ಥಿಸಿದರು. ಸಚ್ಚಿದಾನಂದ ಅಂಗಡಿ ವಚನ ವಾಚಿಸಿದರು. ಕಾಶೀನಾಥ ಸಿಂದಗಿ ವಂದಿಸಿದರು. ವಿಜಯಾ ಅಂಗಡಿ ನಿರ್ವಹಿಸಿದರು.`ಶಿಕ್ಷಕ ಕೇವಲ ಬೋಧಕನಲ್ಲ, ಶಕ್ತಿ'

ಇಂಡಿ
: ಶಿಕ್ಷಕನಾದವನು ಕೇವಲ ಅವನೊಬ್ಬ ಬೋಧಕನಲ್ಲ, ಅದರ ಜೊತೆಗೆ ಅವನೊಬ್ಬ ಸಮಾಜದ ಮಹಾನ್ ಶಕ್ತಿಯಾ ಗಿದ್ದಾನೆ. ಮನುಷ್ಯನ ಜೀವನದಲ್ಲಿ ತಾಯಿ ಮೊದಲನೇ ಶಕ್ತಿ, ಶಿಕ್ಷಕ ಎರಡನೇ ಶಕ್ತಿ ಎಂದು ಪ್ರೊ, ಎ.ಎಸ್.ಗಾಣಿಗೇರ ಅಭಿಪ್ರಾಯಪಟ್ಟರು.ಅವರು ತಾಲ್ಲೂಕಿನ ಹಲಸಂಗಿ ಗ್ರಾಮದ ಶ್ರೀ ಅರವಿಂದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ವಿದ್ಯಾರ್ಥಿ ನಿಯರು ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ  ಮಾತನಾಡಿದರು. ಪ್ರಾಚಾರ್ಯ ಎ.ಸಿ.ಪಾಟೀಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರೊ,ಕೆ.ರವೀಂದ್ರನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಯಲ್ಲಿ  ಅರವಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧರೆಪ್ಪ ಸಾಹುಕಾರ ಮನಮಿ, ನಿರ್ದೇಶಕರಾದ ಎ.ಬಿ. ಜತ್ತಿ, ಪ್ರೊ, ಪಿ.ಡಿ.ಬಿರಾದಾರ, ಪ್ರೊ,ಡಿ.ಬಿ.ತಿಕೋಟಿ, ಎ.ಎಸ್ . ಮನಮಿ, ಬಿ.ಕೆ.ಖೇಡಗಿ, ಶೋಭಾ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕರಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಜಿ. ಮಡಿ ವಾಳ ಉಪನ್ಯಾಸ ನೀಡಿದರು. ಸಿ.ವಿ.ಪೊದ್ದಾರ, ಆರ್.ಎಸ್. ಅಡಕಿ ಸ್ವಾಗತಿಸಿದರು. ಬೂಪಾಳಿ ನಿರೂಪಿಸಿದರು. ಎಂ.ಎಸ್. ನೀಲೂರೆ ಸ್ವಾಗತಿಸಿದರು. ಕುಮಾರಿ ಬೂಪಾಳಿ ವಂದಿಸಿದರು.`ಶಿಕ್ಷಕರು ಜ್ಞಾನದ ಅಕ್ಷಯಪಾತ್ರೆ ಆಗಲಿ'

ಸಿಂದಗಿ:
ಶಿಕ್ಷಕರು ಜ್ಞಾನದ ಅಕ್ಷಯಪಾತ್ರೆಯಾಗಬೇಕು. ಮಕ್ಕಳನ್ನು ಚಾರಿತ್ರ್ಯವಂತರನ್ನಾಗಿ ಮಾಡುವ ಗುರುತರವಾದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸ ಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸಾಹೇಬಗೌಡ ಪಾಟೀಲ ವಣಕಿಹಾಳ ಹೇಳಿದರು.ಗುರುವಾರ ನಗರದ ಜ್ಯೋತಿ ಕಲ್ಯಾಣಮಂಟಪದಲ್ಲಿ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಾಪುರ ಶಿಕ್ಷಕರ ದಿನೋತ್ಸವ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಶಿಕ್ಷಕರ ಮೇಲೆ ಬಿಸಿಯೂಟ, ಕಟ್ಟಡ ನಿರ್ವಹಣೆ, ಕ್ಷೀರಭಾಗ್ಯ ಯೋಜನೆಯಂಥ ಹೆಚ್ಚುವರಿ ಹೊರೆ ಹೊರಿಸು ವುದು ಸರಿಯಲ್ಲ.ಶಿಕ್ಷಕರನ್ನು ಕಲಿಕೆಗೆ ಮಾತ್ರ ಸೀಮಿತ ಗೊಳಿಸುವುದು ಸೂಕ್ತ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುವಂತೆ ಕೇಳಿಕೊಂಡರು. ಶಿಕ್ಷಕರು  ಶಿಕ್ಷಕ ಪ್ರಶಸ್ತಿಗಾಗಿ ಜನಪ್ರತಿನಿಧಿಗಳಿಗೆ ದುಂಬಾಲು ಬೀಳುವದನ್ನು ಬಿಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು ಎಂದರು.ಸಮಾರಂಭದಲ್ಲಿ ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಮೂವರೂ ಶಾಸಕರು ಗೈರು ಉಳಿದಿರುವುದು ಸರಿಯಲ್ಲ ಎಂದರು.  ಜಿಪಂ ಸದಸ್ಯ ಯಲ್ಲಪ್ಪ ಹಾದಿಮನಿ, ಲಚ್ಯಾಣ ಸಿದ್ಧ ಲಿಂಗೇಶ್ವರ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯ     ಎಸ್.ಎಂ.ಶೆಟ್ಟೆಣ್ಣವರ ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ 93ರ ವಯೋವೃದ್ಧ ನಿವೃತ್ತ ಶಿಕ್ಷಕ ಈ ಭಾಗದಲ್ಲಿ `ನಬಿ ಮಾಸ್ತರ' ಎಂದೇ ಖ್ಯಾತರಾದ ತಾಲ್ಲೂಕಿನ ಕೋರವಾರ ಗ್ರಾಮದ ನಬಿಸಾಬ ವಡಗೇರಿ ಅವರನ್ನೊಳ ಗೊಂಡು 25 ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ತಹಶೀಲ್ದಾರ್ ಅಶ್ವತ್ಥನಾರಾಯಣ ಶಾಸ್ತ್ರೀ, ತಾಪಂ ಇಒ ಎಸ್.ಎಂ.ಖೇಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯು.ಐ.ಶೇಖ, ಜಿಪಂ ಸದಸ್ಯೆ ಸಾವಿತ್ರಿ ಅಂಗಡಿ, ಮಹಾಮಂಡಳ ತಾಲ್ಲೂಕು ಅಧ್ಯಕ್ಷ ಪಿ.ಆರ್.ಕಂಟಿಗೊಂಡ ಉಪಸ್ಥಿತರಿದ್ದರು.

ಬಿಇಒ ಶ್ರೀಶೈಲ ಬಿರಾದಾರ ಸ್ವಾಗತಿಸಿದರು. ಅಧ್ಯಾಪಕ ಎಸ್.ಬಿ.ಚೌಧರಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry