ದೇಶದ ಶ್ರೇಷ್ಠ ಪುತ್ರ ನೇತಾಜಿ: ಪ್ರಣವ್

7

ದೇಶದ ಶ್ರೇಷ್ಠ ಪುತ್ರ ನೇತಾಜಿ: ಪ್ರಣವ್

Published:
Updated:
ದೇಶದ ಶ್ರೇಷ್ಠ ಪುತ್ರ ನೇತಾಜಿ: ಪ್ರಣವ್

ಕೋಲ್ಕತ್ತ (ಪಿಟಿಐ):  ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಯುವ ಜನತೆಗೆ ಮಾದರಿ ಎಂದು ಹೇಳಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅವರು ನೀಡಿರುವ ಹಲವು ಕೊಡುಗೆಗಳನ್ನು ಸ್ಮರಿಸಿದರು.ನೇತಾಜಿ ಅವರು ಯುವ ಜನತೆಗೆ ಮಾದರಿ. ಅವರು ದೇಶದ ಶ್ರೇಷ್ಠ ಮಗ. ತಮ್ಮ ಜೀವನವನ್ನು ದೇಶ ಸೇವೆಗಾಗಿ ಹಾಗೂ ತ್ಯಾಗಕ್ಕಾಗಿ ಮುಡುಪಾಗಿಟ್ಟವರು ಎಂದು ನೇತಾಜಿ ಅವರ 116 ನೆಯ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.ನೇತಾಜಿ ಅವರ ಪೂರ್ವಿಕರ ನಿಲಯ `ನೇತಾಜಿ ಭವನ್' ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾಜಿ ಅವರ ಮಗಳು ಅನಿತಾ ಬೋಸ್ ಪಾಫ್ ಹಾಗೂ ಅವರ ಪತಿ ಮಾರ್ಟಿನ್ ಪಾಫ್ ಹಾಗೂ  ಸಂಬಂಧಿ ಕೃಷ್ಣಾ ಬೋಸ್ ಕೂಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry