ಗುರುವಾರ , ಮೇ 26, 2022
23 °C

ದೇಶದ ಸಾಮಾಜಿಕ ವ್ಯವಸ್ಥೆ ವಿಶ್ವಕ್ಕೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಸರ್ವ ಧರ್ಮಗಳನ್ನು ಒಳಗೊಂಡು ವಿಶ್ವಕ್ಕೆ ಮಾದರಿಯಾಗಿರುವ ಧರ್ಮ, ಸಂಸ್ಕೃತಿ ಮತ್ತು ಉನ್ನತ ಪರಂಪರೆ ಹೊಂದಿರುವ ನಮ್ಮ ದೇಶದ ಪ್ರಸಕ್ತ ಸಾಮಾಜಿಕ ವ್ಯವಸ್ಥೆ ಯಥಾಸ್ಥಿತಿ ಮುಂದುವರಿಯುವ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಅವಶ್ಯಕವಾಗಿದೆ ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಶುಕ್ರವಾರ ಹೇಳಿದರು.ತಾಲ್ಲೂಕಿನ ಕಿಡದೂರು ಬಳಿ ಇರುವ ಅಮ್ಮನಕಟ್ಟೆಯಲ್ಲಿ ನಡೆದ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ ಆರಾಧನಾ ಮಹೋತ್ಸವದಲ್ಲಿ ಅತಿಥಿಯಾಗಿ ಮಾತನಾಡಿದ ಅವರು ಭ್ರಷ್ಟಾಚಾರ, ಜಾತಿ ವ್ಯವಸ್ಥೆಗಳನ್ನು ಮುಂದೆ ಮಾಡಿಕೊಂಡು ಸಮಾಜವನ್ನು ವಿಭಜಿಸುವ ಶಕ್ತಿಗಳನ್ನು ಎದುರಿಸುವ ದೊಡ್ಡ ಸವಾಲು ದೇಶದ ಮುಂದಿದೆ ಎಂದರು.ಶಾಸಕರಾದ ಸಂತೋಷ್ ಲಾಡ್, ಅಮರೇಗೌಡ ಬಯ್ಯಾಪೂರ, ಕಣ್ವ ಮಠಾಧೀಶ ವಿದ್ಯಾಭಾಸ್ಕರ ತೀರ್ಥ ಸ್ವಾಮೀಜಿ,  ಕುಕ್ಕೆ ಸುಬ್ರಮಣ್ಯ ಮಠದ ವಿದ್ಯಾ ಪ್ರಸನ್ನ ಸ್ವಾಮೀಜಿ ಮಾತ ನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯನ್ನು ಸತ್ಕರಿಸಲಾಯಿತು. ರಾಘವೇಂದ್ರ ರಾವ್ ಅಲಬನೂರು ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.