ಬುಧವಾರ, ಏಪ್ರಿಲ್ 14, 2021
32 °C

ದೇಶಪ್ರೇಮ ಬೆಳೆಸಿ: ಶಿಕ್ಷಕರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಮಾಗಡಿ:  ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ದೇಶಪ್ರೇಮದ ಬಗ್ಗೆ ಅರಿವು ಮೂಡಿಸಬೇಕು  ಎಂದು  ಮುಖ್ಯೋಪಾಧ್ಯಾಯ ಎಚ್.ಡಿ.ದೇವರಾಜು ಕರೆ ನೀಡಿದರು.

ಸರಸ್ವತಿ ವಿದ್ಯಾಮಂದಿರದಲ್ಲಿ ಏರ್ಪಡಿಸಿದ್ದ ಭಗತ್ ಸಿಂಗ್, ರಾಜಗುರು, ಸುಖದೇವ್ ಒಂದು ನೆನಪು ಕಾರ್ಯಕ್ರಮದಲ್ಲಿ  ಶ್ರದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

 

ರಾಜ್‌ಗುರು ಮಹಾರಾಷ್ಟ್ರದ ಕಡು ಬಡತನದಲ್ಲಿ ಜನಿಸಿದಾತ. ತನ್ನ ಸರ್ವಸ್ವವನ್ನು ಭಾರತ ಮಾತೆಗೆ ಅರ್ಪಿಸಿದ ಧೀರಪುತ್ರ. ತ್ಯಾಗ ಬಲಿದಾನದ ಮೂಲಕ ತಾಯಿನಾಡಿನ ಬಂಧ ವಿಮೋಚನೆಗೆ ತನ್ನ ಜೀವವನ್ನು ಬಲಿದಾನ ಗೈದ ವೀರರ ಸಾಹಸಗಾಥೆಗಳು ಯುವ ಜನತೆಗೆ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.ಶಿಕ್ಷಕ ಶಿವಾನಂದ ಹೆಗಡೆ ಮಾತನಾಡಿ, ಭಾರತ ಮಾತೆಯ ಧೀರ ಪುತ್ರ ಭಗತ್ ಸಿಂಗ್ ಪರಕೀಯರ ಆಕ್ರಮಣದಿಂದ ಜನ್ಮಭೂಮಿಯನ್ನು ಬಿಡುಗಡೆಗೊಳಿಸಲು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಕೊನೆಯುಸಿರೆಳದರು. ಯುವ ಜನತೆ ಕ್ರಾಂತಿಕಾರಿಗಳು ಮತ್ತು ದೇಶಭಕ್ತರ ಜೀವನ ಚರಿತ್ರೆಗಳನ್ನು ಓದಿ ತಮ್ಮ ಜೀವನವನ್ನು ರೂಪಿಸಿ ಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

 

ಸರಸ್ವತಿ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ನೇತ್ರಾವತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಚಿಂತಕ ಎಸ್.ಸುನಿಲ್, ಶಿಕ್ಷಕರಾದ ಆರ್.ಮಾರೇಗೌಡ, ಬಿ.ಕೆ.ಬದರಿನಾಥ್, ಗಣೇಶ್ ಭಟ್, ಲಕ್ಷ್ಮೀ, ನಾಗರಾಜ ಭಾವಿ, ಉಮಾದೇವಿ, ಕಾವ್ಯ, ರವಿಕುಮಾರ್ ಮಾತನಾಡಿದರು. ಪ್ರಾಥಮಿಕ ಶಾಲೆ ಶಿಕ್ಷಕರಾದ ಮಂಜುನಾಥ್, ಜಯಶ್ರೀ, ಮರಿಯಾ, ದೇವೇಂದ್ರ ಕುಮಾರ್, ಪ್ರಕಾಶ್ ನಾಗತೀರ್ಥ, ಸಿಬ್ಬಂದಿವರ್ಗ ಹಾಗೂ  ಪೋಷಕರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.