ಭಾನುವಾರ, ಅಕ್ಟೋಬರ್ 20, 2019
21 °C

ದೇಶಿಯ ಬತ್ತ ತಳಿಗಳ ಕೃಷಿ ಆಂದೋಲನ ಇಂದು

Published:
Updated:

ತಿ.ನರಸೀಪುರ: ತಾಲ್ಲೂಕಿನ ಗದ್ದೆಮೊಳೆ ಗ್ರಾಮದ ಸಮೀಪ ಪ್ರಗತಿಪರ ರೈತ ಎಸ್.ಆರ್.ಶ್ರೀನಿವಾಸಮೂರ್ತಿ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿರುವ 200 ಮಾದರಿಯ ದೇಶಿಯ ತಳಿಗಳ ಕೃಷಿ ಆಂದೋಲನ ಹಾಗೂ ಬತ್ತ ತಳಿಗಳ ಕ್ಷೇತ್ರೋತ್ಸವ ಜನವರಿ 2 ರ ಸೋಮವಾರ ನಡೆಯಲಿದೆ.ರೈತ ಶ್ರೀನಿವಾಸಮೂರ್ತಿ ಅವರು ದೇಶಿಯ ಬತ್ತಗಳ ಸಂರಕ್ಷಣೆ ಹಾಗೂ ಬಿತ್ತನೆ ಬೀಜ ಬ್ಯಾಂಕ್ ನಿರ್ಮಾಣಕ್ಕಾಗಿ ಸಾವಯವ ಕೃಷಿ ಹಾಗೂ ಶ್ರೀಪದ್ಧತಿಯ ಮೂಲಕ ದೇಶಿಯ ತಳಿಗಳನ್ನು ಬೆಳೆಸಿದ್ದಾರೆ. ಈ ತಳಿಗಳಲ್ಲಿ ಔಷಧ ಗುಣಗಳುಳ್ಳ ತಳಿಗಳು ಸೇರಿದಂತೆ ವಿವಿಧ ಮಾದರಿಯ ತಳಿಗಳನ್ನು ಬೆಳೆಯಲಾಗಿದೆ.

 

ಗ್ರಾಮೀಣ ಭಾಗದ ರೈತರಿಗೆ ದೇಶಿಯ ತಳಿಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಬತ್ತ ಕೃಷಿ ಸಂಸ್ಕೃತಿ ಉಳಿವಿಗಾಗಿ ಬೆಂಗಳೂರಿನ ಸಹಜ ಸಮೃದ್ಧಿ ಸಂಸ್ಥೆ ಹಾಗೂ ಕೃಷಿ ಇಲಾಖೆಯ ಸಹಕಾರದೊಡನೆ ಈ ಕೃಷಿ ಆಂದೋಲನವನ್ನು ನಡೆಸಲಾಗುತ್ತಿದ್ದು, ಈ ಆಂದೋಲನದಲ್ಲಿ ಬೀಜ ಸಂರಕ್ಷಕರು, ರೈತ ವಿಜ್ಞಾನಿಗಳು, ಹಾಗೂ ಸಾವಯವ ಕೃಷಿಕರು ಭಾಗವಹಿಸಲಿದ್ದಾರೆ. ಅವರು ದೇಶಿಯ ತಳಿಗಳ ಬಗ್ಗೆ ಉಪನ್ಯಾಸಗಳನ್ನು ನೀಡಲಿದ್ದಾರೆ.

 

ಈ ಆಂದೋಲನವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಶಾಸಕ ಡಾ.ಎಚ್.ಸಿ. ಮಹಾದೇವಪ್ಪ ವಹಿಸಲಿದ್ದಾರೆ~ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)