ದೇಶಿ ಕ್ರೀಡೆಗೆ ಪ್ರೋತ್ಸಾಹ: ಕಾಗೇರಿ

7

ದೇಶಿ ಕ್ರೀಡೆಗೆ ಪ್ರೋತ್ಸಾಹ: ಕಾಗೇರಿ

Published:
Updated:

ಸಿದ್ದಾಪುರ: `ವಾಲಿಬಾಲ್, ಕಬಡ್ಡಿ  ಮತ್ತಿತರ ಆಟಗಳಿಗೆ ಹೆಚ್ಚಿನ ಪ್ರೋತ್ಸಾ ಹದ ಅಗತ್ಯವಿದೆ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಸಿದ್ಧಿವಿನಾಯಕ ಬಾರ್‌ಬೆಂಡಿಂಗ್ ಮತ್ತು ಸೆಂಟರಿಂಗ್ ಅಸೊ ಸಿಯೇಶನ್‌ನ ಆಶ್ರಯದಲ್ಲಿ ಪಟ್ಟಣದ ನೆಹರೂ ಮೈದಾನದಲ್ಲಿ  ಭಾನುವಾರ ರಾತ್ರಿ ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.`ಬಾರ್ ಬೆಂಡಿಂಗ್, ಸೆಂಟರಿಂಗ್ ಕೆಲಸಗಾರರು ಮತ್ತು ಗುತ್ತಿಗೆದಾರರ ಮಧ್ಯೆ ಉತ್ತಮ ಬಾಂಧವ್ಯವಿದ್ದರೇ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

 

ಯಾವುದೇ ಕೆಲಸವೂ ಕಡಿಮೆಯಲ್ಲ,ಎಲ್ಲವೂ ಪ್ರಮುಖ ಕೆಲಸಗಳೇ ಆಗಿವೆ. ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುವದು ಮುಖ್ಯ~ ಎಂದು ನುಡಿದ ಅವರು, ಸ್ಥಳೀಯ ನೆಹರೂ ಮೈದಾನ ವನ್ನು ಸುಸಜ್ಜಿತಗೊಳಿಸಲು ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಶ್ರೇಯಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ ವೈದ್ಯ, ಪ.ಪಂ.ಸದಸ್ಯ ಗುರುರಾಜ ಶಾನಭಾಗ, ಎಂಜನಿಯರ್ ಸಚೇತನ ಹೆಗಡೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ  ಸತೀಶ್ ಗೌಡರ್ ಉಪಸ್ಥಿತ ರಿದ್ದರು. ಪ.ಪಂ.ಅಧ್ಯಕ್ಷ ಕೆ.ಜಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ವೆಂಕಟೇಶ್ ಹೊಸಳ್ಳಿ,ರಫೀಕ್, ರವಿ ಹೆಗಡೆ, ಸತೀಶ್ ಗೌಡರ್, ನಾಗರಾಜ ಪಾಟೀಲ ಅವರನ್ನು ಸನ್ಮಾನಿಸಲಾ ಯಿತು. ರಾಜು ಅವರಗುಪ್ಪ ಸ್ವಾಗತಿಸಿ ದರು. ವೆಂಕಟೇಶ  ನಿರೂಪಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry