ಮಂಗಳವಾರ, ಏಪ್ರಿಲ್ 13, 2021
28 °C

ದೇಶ ಎಲ್ಲ ರಂಗದಲ್ಲಿ ಅಭಿವೃದ್ಧಿ ಸಾಧಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಅಭಿವೃದ್ಧಿ ಸಾಧಿಸಿದವರು ಯಾವಾಗಲೂ ಶಾಂತಿಯಿಂದ ಇರುತ್ತಾರೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ನುಡಿದರು.

ಎಸ್‌ಜೆಎಂಐಟಿ ಆವರಣದಲ್ಲಿ ಬುಧವಾರ ನಡೆದ 66ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ತೆರೆದ ವಾಹನದಲ್ಲಿ ವಂದನೆ ಸ್ವೀಕರಿಸಿ, ಪಥಸಂಚಲನದ ವೀಕ್ಷಿಸಿದ  ನಂತರ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಭಾರತೀಯರಾದ ನಾವು ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ಆದರೆ, ಒಲಿಂಪಿಕ್ಸ್‌ನಲ್ಲಿ ಇನ್ನೂ ಬಂಗಾರದ ಪದಕ ಪಡೆಯುವಷ್ಟು ಸಮರ್ಥತೆ ನಮ್ಮಲ್ಲಿ ಇಲ್ಲವೇ ಎಂದು ಯೋಚಿಸಬೇಕಾಗಿದೆ. ಪ್ರಯತ್ನ ಬಹಳ ಮುಖ್ಯ. ಸೋಮಾರಿತನ ನಮ್ಮಲ್ಲಿ ಆವರಿಸುವುದರೊಂದಿಗೆ ಅವಕಾಶಗಳಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಜೆಎಂ ನೌಕರ ವರ್ಗದವರಿಗೆ ಪ್ರತಿವರ್ಷದಂತೆ ಈ ವರ್ಷವೂ ಶೇಕಡಾ 7ರಷ್ಟು ತುಟ್ಟಿಭತ್ಯೆಗೆ ಆದೇಶಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತರಾದವರಿಗೆ, ಪಿಎಚ್.ಡಿ. ಪದವಿ ಪಡೆದವರಿಗೆ ಹಾಗೂ ಕಲೆ, ಕ್ರೀಡಾ ವಿಭಾಗದಲ್ಲಿ ಅಂತರ್‌ರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮತ್ತು ರ‌್ಯಾಂಕ್ ವಿಜೇತರಿಗೆ ಶರಣರು ಸನ್ಮಾನಿಸಿ ಗೌರವಿಸಿದರು.

ಎಸ್‌ಜೆಎಂ ಕಾನೂನು ಕಾಲೇಜಿನಿಂದ ಪದವಿ ಪಡೆದು ಕಳೆದ ಬಾರಿ ರಾಜ್ಯದಲ್ಲಿ ಒಬ್ಬರೇ ನ್ಯಾಯಾಧೀಶರಾಗಿ ನೇಮಕವಾದ ವೆಂಕಟೇಶ್ ನಾಯಕ್ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ಶಾಲಾಕಾಲೇಜುಗಳ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಗಾಯನ, ನರ್ತನ ಹಾಗೂ ರೂಪಕ ನಡೆಸಿಕೊಟ್ಟು ದೇಶಭಕ್ತಿ ಮೆರೆದರು.

ಪಥಸಂಚಲನದಲ್ಲಿ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಎಸ್‌ಜೆಎಂ ಆಂಗ್ಲ ಶಾಲೆ ವಿದ್ಯಾರ್ಥಿಗಳು ಪ್ರಥಮ, ಇದೇ ಶಾಲೆಯ ಸ್ಕೌಟ್ಸ್‌ನವರು ದ್ವಿತೀಯ ಹಾಗೂ ಪ್ರಿಯದರ್ಶಿನಿ ಶಾಲಾ ತಂಡದವರು ತೃತೀಯ ಸ್ಥಾನ ಪಡೆದರು.  ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಎಸ್‌ಜೆಎಂ ಕ್ರೆಡಿಟ್ ಕೋ ಆಪ್ ಸೊಸೈಟಿ ವಹಿಸಿಕೊಂಡಿತ್ತು. ಪ್ರಿಯಂಕಾ ಹಾಗೂ ಪವನ್ ಕಾರ್ಯಕ್ರಮ ನಿರೂಪಿಸಿದರು.

ಮುರುಘಾಮಠದಲ್ಲಿ ರಾಷ್ಟ್ರಧ್ವಜಾರೋಹಣ

ಮುರುಘಾಮಠದ ಆವರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಈ.ಚಿತ್ರಶೇಖರ್ ಹಾಗೂ ಮಠದ ವ್ಯವಸ್ಥಾಪಕರಾದ ಜಿ.ಚಂದ್ರಶೇಖರ್, ಜಮುರಾ ಕಲಾಲೋಕದ ಸಂಚಾಲಕ ಎ.ಜೆ. ಪರಮಶಿವಯ್ಯ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.