ದೇಶ ಕಟ್ಟುವಲ್ಲಿ ಕಾರ್ಮಿಕರ ಸಹಭಾಗಿತ್ವ ಅಗತ್ಯ: ಸಚಿವ

7

ದೇಶ ಕಟ್ಟುವಲ್ಲಿ ಕಾರ್ಮಿಕರ ಸಹಭಾಗಿತ್ವ ಅಗತ್ಯ: ಸಚಿವ

Published:
Updated:

ಮೈಸೂರು: `ಆಡಳಿತದಲ್ಲಿ ಕಾರ್ಮಿ ಕರು ಭಾಗಿಯಾದಾಗ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬುದು ಅಂಬೇಡ್ಕರ್ ನಿಲುವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಿಕ್ರಾಂತ್ ದಲಿತ ನೌಕರರ ಸಮಿತಿ ವತಿಯಿಂದ ನಗರದ ಶಾರದ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮಂಗಳ ವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಮಿಕ ನಾಯಕನಾಗಿ ಅಂಬೇಡ್ಕರ್ ಅನುಭವಿಸಿದ್ದ ನೋವು ಗಳು ಮತ್ತು ಕಾರ್ಮಿಕರ ಮೌಲ್ಯಗಳ ಬಗ್ಗೆ ಅವರಿಗಿದ್ದ ಕಾಳಜಿ ಸಂವಿಧಾನ ದಲ್ಲಿ ಕಾರ್ಮಿಕರಿಗೆ ರಕ್ಷಣೆ ನೀಡಲು ಅವಕಾಶ ಕಲ್ಪಿಸಿತು. ಕಾರ್ಮಿಕ ಕಾಯ್ದೆಯನ್ನು ರೂಪಿಸದಿದ್ದರೆ, ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳಲು ಅವಕಾಶ ಇರದಿದ್ದರೆ ಬಹಳಷ್ಟು ಸಂಕಷ್ಟಗಳನ್ನು ಕಾರ್ಮಿಕರು ಅನುಭವಿ ಸಬೇಕಾಗುತ್ತಿತ್ತು. ಐಟಿ, ಬಿಟಿ ಕ್ಷೇತ್ರದಲ್ಲಿ ಯೂನಿಯನ್‌ಗಳಿಗೆ ಅವಕಾ ಶವೇ ಇಲ್ಲವಾಗಿದ್ದು, ಅಭದ್ರತೆಯ ಕರಿನೆರಳಲ್ಲೇ ಕಾರ್ಮಿಕರು ಕೆಲಸ ಮಾಡಬೇಕಾಗಿದೆ ಎಂದರು.ಅಂಬೇಡ್ಕರ್ ಉತ್ಕಟ ದೇಶಪ್ರೇಮಿ ಯಾಗಿದ್ದರು. ಅವರ ದೂರದೃಷ್ಟಿಯ ಫಲವಾಗಿ ಭಾರತಕ್ಕೆ ವಿಶ್ವಮಟ್ಟದಲ್ಲಿ  ಉನ್ನತಸ್ಥಾನ ಪ್ರಾಪ್ತಿಯಾಗಿದೆ. ಇಂಥ ಮಾನವತಾವಾದಿಯನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿ ಯಲ್ಲ ಎಂದ ಅವರು ನಗರದಲ್ಲಿ ಅಂಬೇಡ್ಕರ್ ಸಂದೇಶ ಭವನ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿದರು. ಶಾಸಕ ವಿ.ಶ್ರೀನಿವಾಸ್‌ಪ್ರಸಾದ್ ಮಾತನಾಡಿ, ರೋಗಗ್ರಸ್ಥ ಸಮಾಜ ನಿರ್ಮಾಣಕ್ಕೆ ಜಾತೀಯತೆ ಕಾರಣ. ಬಡತನವನ್ನು ಸಹಿಸಬಹುದು ಆದರೆ ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ ಸಹಿಸಲಸಾಧ್ಯ.  ಕ್ಷುಲ್ಲಕ ಕಾರಣಗಳಿಗೆ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಅಮಾನವೀಯ. 21ನೇ ಶತಮಾನದಲ್ಲಿಯೂ ಜಾತೀ ಯತೆ ಅಸ್ತಿತ್ವದಲ್ಲಿರುವುದು ವಿಷಾದ ನೀಯ ಎಂದರು.ಜೆಕೆಐ ವಿಕ್ರಾಂತ್ ಪ್ಲಾಂಟ್ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಶ್ರೀನಿವಾಸ್, ಆದಿ ಕರ್ನಾಟಕ ಮಹಾ ಸಂಸ್ಥೆ ಅಧ್ಯಕ್ಷ ವಿ.ರಾಮಸ್ವಾಮಿ, ಉದ್ಯಮಿ ಗಂಗಾಧರ್, ವಿಐಟಿಯು ಅಧ್ಯಕ್ಷ ಎಸ್.ರಾಮು, ಸಹ ಕಾರ್ಯದರ್ಶಿ ಎಸ್.ಚಿಕ್ಕಮಂಜಯ್ಯ, ವಿಕ್ರಾಂತ್ ದಲಿತ ನೌಕರರ ಸಂಘದ ಅಧ್ಯಕ್ಷ ಪಿ.ಮಹೇಶ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಇದ್ದರು.ವಿಕ್ರಾಂತ್ ದಲಿತ ನೌಕರರ ಸಂಘದ ಉಪಾಧ್ಯಕ್ಷ ಪಿ.ಮಹಾದೇವ ಮೂರ್ತಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry