ದೇಶ ಪ್ರವಾಸದಿಂದ ಲೋಕಜ್ಞಾನ ಪ್ರಾಪ್ತಿ

7

ದೇಶ ಪ್ರವಾಸದಿಂದ ಲೋಕಜ್ಞಾನ ಪ್ರಾಪ್ತಿ

Published:
Updated:

ಮುಂಬೈ: ಪ್ರವಾಸ ಮಾಡುವುದರಿಂದ ಲೋಕಜ್ಞಾನ ಪ್ರಾಪ್ತಿಯಾಗುವುದು ಎಂದು ಗೋರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷ ಪಯ್ಯಾರು ಕೆ.ರಮೇಶ್ ಅವರು ಇಲ್ಲಿ ಹೇಳಿದರು.ಇಲ್ಲಿನ ಗೋರೆಗಾಂವ್ ಕರ್ನಾಟಕ ಸಂಘದ ಶ್ರೀನಿವಾಸ ಜೋಕಟ್ಟೆ ಅವರ ಪ್ರವಾಸ ಸಂಕಲನ `ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ~ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕೃತಿಯನ್ನು ಖ್ಯಾತ ಛಾಯಾಗ್ರಾಹಕ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಬಿಡುಗಡೆ ಮಾಡಿದರು. ಕೃತಿಯಲ್ಲಿ ಪ್ರವಾಸಿ ತಾಣ, ಧಾರ್ಮಿಕ ಸ್ಥಳ ಹೀಗೆ ಎಲ್ಲ ಸ್ಥಳಗಳಿಗೆ ಸಂಬಂಧಪಟ್ಟ ಲೇಖನಗಳಿವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ ಜಿ.ಟಿ. ಆಚಾರ್ಯ ಅವರು ಪ್ರವಾಸಗಳ ನೆನಪುಗಳನ್ನು ದಾಖಲಿಸುವ ಕೆಲಸ ಹೆಚ್ಚು ಆಗಬೇಕೆಂದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry