ದೇಶ ಸೇವೆಗೆ ಸನ್ನದ್ಧರಾಗಲು ಸಲಹೆ

7

ದೇಶ ಸೇವೆಗೆ ಸನ್ನದ್ಧರಾಗಲು ಸಲಹೆ

Published:
Updated:
ದೇಶ ಸೇವೆಗೆ ಸನ್ನದ್ಧರಾಗಲು ಸಲಹೆ

ಗದಗ: ವಿವೇಕಾನಂದರ ಸಿಂಹವಾಣಿಯಿಂದ ಪ್ರೇರಣೆ ಪಡೆದು ಯುವಕರು ದೇಶ ಸೇವೆಗೆ ಸನ್ನದ್ಧರಾಗಬೇಕು ಎಂದು ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ ಯುವಕರಿಗೆ ಸಲಹೆ ನೀಡಿದರು.ನಗರದ ಮುಳಗುಂದ ನಾಕಾದಲ್ಲಿರುವ ವಿಠ್ಠಲಾರೋಡ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದರ 150 ನೇ ಜನ್ಮ

ವರ್ಷಾಚರಣೆ ಸಮಿತಿ ಏರ್ಪಡಿಸಿದ್ದ ಭಾರತ ಜಾಗೃತಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.ಯುವಕರು ಧರ್ಮಾಂಧತೆ, ಮತಾಂತರ, ಭಯೋತ್ಪಾಧನೆಯಂತಹ ಭೀಕರ ಸಮಸ್ಯೆಗಳನ್ನು  ತೊಲಗಿಸಿ, ಮಾನವಿತೇಯ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಯುವಕರು ಸೇವಾ ಕಾರ್ಯವನು್ನ ಅಳವಡಿಸಿಕೊಂಡು ದೇಶದ ಮೌಲ್ಯಗಳನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.ವಿವೇಕ ಜಾಗೃತ ಬಳಗದ ಸಂಚಾಲಕ ಎಂ.ಎಸ್.ಚಿನ್ನೂರ ಉಪನ್ಯಾಸ ನೀಡಿದರು.ಪ್ರಾ. ಟಿ.ಎಸ್.ಜಮಾದಾರ, ಗಂಗಣ್ಣ ಕೋಟಿ, ರುದ್ರಣ್ಣ ಗುಳಗುಳಿ ಹಾಜರಿದ್ದರು. ನಂತರ ನಡೆದ ಭಾರತ ಜಾಗೃತಿ ಓಟವು ಮುಳಗುಂದ ನಾಕಾದಿಂದ ಪ್ರಾರಂಭಗೊಂಡು ಕಿತ್ತೂರ ಚನ್ನಮ್ಮ ರಾಣಿ ವೃತ್ತ, ದತ್ತಾತ್ರೆಯ ದೇವಸ್ಥಾನ, ನಾಮಜೋಶಿ ರಸ್ತೆ, ಸ್ಟೇಷನ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತ ತಲುಪಿತು. ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಈ ಓಟದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry