ದೇಹದಾರ್ಢ್ಯ: ಬಾಲಕೃಷ್ಣ ಕರ್ನಾಟಕ ಶ್ರೇಷ್ಠ

7

ದೇಹದಾರ್ಢ್ಯ: ಬಾಲಕೃಷ್ಣ ಕರ್ನಾಟಕ ಶ್ರೇಷ್ಠ

Published:
Updated:

ಬೆಂಗಳೂರು: ರಾಕ್ ಮಲ್ಟಿನ ಜಿಮ್‌ನ ಜಿ. ಬಾಲಕೃಷ್ಣ ಅವರು ಶ್ರೀಕೃಷ್ಣ ದೇವರಾಯ ಕ್ರೀಡಾ ಸಮಿತಿ ಆಶ್ರಯದಲ್ಲಿ ಇಲ್ಲಿ ನಡೆದ 58ನೇ ರಾಜ್ಯ ಅಮೆಚೂರ್ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ‘ಕರ್ನಾಟಕ ಶ್ರೇಷ್ಠ’ ಮತ್ತು ‘ಕರ್ನಾಟಕ ಕಿಶೋರ್’ ಗೌರವ ತಮ್ಮದಾಗಿಸಿಕೊಂಡರು.ಜರಗನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಜನವರಿ 14 ಮತ್ತು 15 ರಂದು  ನಡೆದ ಚಾಂಪಿಯನ್‌ಷಿಪ್‌ನ ಇತರ ವಿಭಾಗಗಳ ಸ್ಪರ್ಧೆಗಳಲ್ಲಿ ಹಾರ್ಡ್‌ಕೋರ್ ಜಿಮ್‌ನ ದೀಪಕ್ ಕಾವೇರಪ್ಪ (ಕರ್ನಾಟಕ ಶ್ರೀ), ಮಸಲ್ ಪ್ಲಾನೆಟ್‌ನ ರಾಘವೇಂದ್ರ ಶೆಟ್ಟಿ (ಕರ್ನಾಟಕ ಕುಮಾರ್), ರಾಕ್ ಮಲ್ಟಿ ಜಿಮ್‌ನ ಪಿ. ಮುರಳಿ (ಕರ್ನಾಟಕ ಉದಯ), ಹರ್ಕ್ಯುಲಸ್ ಜಿಮ್‌ನ ಟಿ.ಬಿ. ಮಂಜುನಾಥ್ (ಕರ್ನಾಟಕ ಕೇಸರಿ), ಎ.ಜೆ. ಆರ್ಕಿಟೆಕ್ಟ್‌ನ ಎಸ್. ಶಂಕರ್ (ಕರ್ನಾಟಕ ಶ್ರೀ ಇಂಡಸ್ಟ್ರೀಸ್), ಫಿಟ್‌ನೆಸ್ ಇನ್‌ನ ಪಿ. ರಾಘವೇಂದ್ರ (ಕರ್ನಾಟಕ ನವಚೇತನ) ಅವರು ಪ್ರಶಸ್ತಿ ಗಿಟ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry