ದೇಹದಾರ್ಢ್ಯ: ಬಾಲಕೃಷ್ಣ ಭಾರತ್ ಕಿಶೋರ

7

ದೇಹದಾರ್ಢ್ಯ: ಬಾಲಕೃಷ್ಣ ಭಾರತ್ ಕಿಶೋರ

Published:
Updated:
ದೇಹದಾರ್ಢ್ಯ: ಬಾಲಕೃಷ್ಣ ಭಾರತ್ ಕಿಶೋರ

ಬೆಂಗಳೂರು: ಕರ್ನಾಟಕದ ಜಿ.ಬಾಲಕೃಷ್ಣ ಕರ್ನಾಟಕ ಅಮೆಚೂರ್ ದೇಹದಾರ್ಢ್ಯ ಪಟುಗಳ ಸಂಸ್ಥೆ (ಕೆಎಬಿಎ) ಆಶ್ರಯದಲ್ಲಿ ನಡೆದ 60ನೇ ರಾಷ್ಟ್ರೀಯ ಅಮೆಚೂರ್ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ `ಭಾರತ್ ಕಿಶೋರ್~ ಗೌರವಕ್ಕೆ ಪಾತ್ರರಾದರು.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ವಿಭಾಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಅಂಗಸೌಷ್ಟವ ಪ್ರದರ್ಶಿಸಿದ ಅವರು ಮೊದಲ ಸ್ಥಾನ ಪಡೆದು 25 ಸಾವಿರ ರೂ. ಬಹುಮಾನ ಗೆದ್ದರು. ಎರಡು ದಿನ ನಡೆದ ಚಾಂಪಿಯನ್‌ಷಿಪ್‌ನಲ್ಲಿ 15 ರಾಜ್ಯಗಳ ಸುಮಾರು 300 ಸ್ಪರ್ಧಿಗಳು ತಮ್ಮ ಅಂಗಸೌಷ್ಟವ ಪ್ರದರ್ಶಿಸಿದರು.ರಾಜ್ಯದ ಸೈಯದ್ ಸಿದ್ಧಿಕ್ `ಭಾರತ್ ಕುಮಾರ್~ ಪ್ರಶಸ್ತಿ ಜಯಿಸಿದರು. ಅದಕ್ಕಾಗಿ ಅವರು 25 ಸಾವಿರ ರೂ.ಬಹುಮಾನ ಗಳಿಸಿದರು. ಉತ್ತರ ಪ್ರದೇಶದ ಮೊಹಮ್ಮದ್ ಖಾಲೀದ್ `ಭಾರತ್ ಉದಯ~ (25 ಸಾವಿರ ಬಹುಮಾನ) ಹಾಗೂ ಮಹಾರಾಷ್ಟ್ರದ ಅಂಕುಶ್ ಶಿವರಾಮ್  `ಭಾರತ್ ಕೇಸರಿ~ (15 ಸಾವಿರ) ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಇದೇ ಸಂದರ್ಭದಲ್ಲಿ ಹಿರಿಯ ದೇಹದಾರ್ಢ್ಯ ಪಟುಗಳನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry