ದೇಹದಾರ್ಢ್ಯ ಸ್ಪರ್ಧೆ: ಕೃಷ್ಣಗೆ ಚಿನ್ನದ ಪದಕ

7

ದೇಹದಾರ್ಢ್ಯ ಸ್ಪರ್ಧೆ: ಕೃಷ್ಣಗೆ ಚಿನ್ನದ ಪದಕ

Published:
Updated:

ಹುಬ್ಬಳ್ಳಿ: ಧಾರವಾಡ ಜಿಲ್ಲಾ ದೇಹದಾರ್ಢ್ಯ ಸಂಸ್ಥೆಯ ಕೃಷ್ಣ ಚಿಕ್ಕತುಂಬಳ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ 48ನೇ ರಾಷ್ಟ್ರೀಯ ಕಿರಿಯರ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನ 75 ಕೆ.ಜಿ. ಮೇಲ್ಪಟ್ಟವರ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.ವಿಕಲಾಂಗರ ರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ಸಂಸ್ಥೆಯ ಕಾಸಿಮ್‌ಸಾಬ್ ರಾಯಚೂರು 55 ಕೆಜಿ ಒಳಗಿನವರ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದರೆ, ಮಹಮ್ಮದ್ ಗೌಸ್ ಕಳಸಾಪುರ ನಾಲ್ಕನೇ ಸ್ಥಾನ ಪಡೆದಿದ್ದಾರೆ.50 ವರ್ಷ ಮೇಲ್ಪಟ್ಟ (70 ಕೆಜಿಗಿಂತ ಅಧಿಕ ಭಾರ) ಹಿರಿಯರ ಚಾಂಪಿಯನ್‌ಷಿಪ್‌ನಲ್ಲಿ ಶಂಕರ ಪಿಳ್ಳೈ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಹಿರಿಯರ ವಿಭಾಗದಲ್ಲಿ ರವಿಕುಮಾರ ಎರಡನೇ ಸ್ಥಾನ, ಸಿ.ಎ. ಜಯಣ್ಣ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry