ದೊಡ್ಡಕೆರೆಯಲ್ಲಿ ಶವಪತ್ತೆ

7

ದೊಡ್ಡಕೆರೆಯಲ್ಲಿ ಶವಪತ್ತೆ

Published:
Updated:

ಹೊಸಕೋಟೆ: ಪಟ್ಟಣದ ಹೊರ ವಲಯ­ದ ಅಮಾನಿ ದೊಡ್ಡಕೆರೆಯಲ್ಲಿ ತೇಲು­ತ್ತಿದ್ದ ವೃದ್ಧರೊಬ್ಬರ ಶವವನ್ನು ಪೊಲೀಸರು ಸೋಮವಾರ ಹೊರತೆಗೆದಿ­ದ್ದಾರೆ. ಮೃತರನ್ನು ಗಾಣಿಗರಪೇಟೆ ವಾಸಿ ಗೋಪಾಲ್ (68) ಎಂದು ಗುರುತಿಸ­ಲಾಗಿದೆ. ಮದ್ಯವ್ಯಸನಿಯಾಗಿದ್ದ ಅವರು ಅನಾರೋಗ್ಯದಿಂದ ಬೇಸತ್ತು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರ­ಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.ಶವ ಪತ್ತೆ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಮೇಲ್ಸೇತುವೆ ಕೆಳಗೆ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸಿನ ಆ ವ್ಯಕ್ತಿ ಮಾಸಲು ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿದ್ದು ಯಾವುದೋ ಕಾಯಿಲೆಯಿಂದ ಸತ್ತಿರ­ಬಹುದು ಎಂದು ಶಂಕಿಸಲಾಗಿದೆ. ಆತ ಚಿಂದಿ ಪೇಪರ್ ಆಯುತ್ತಿದ್ದು ತಮಿಳು ಮಾತನಾಡುತ್ತಿದ್ದ ಎಂದು ಸಾರ್ವಜನಿ­ಕರು ತಿಳಿಸಿದ್ದಾರೆ. ವಿಳಾಸ ಪತ್ತೆಯಾಗಿಲ್ಲ. ಶವವನ್ನು ಎಂವಿಜೆ ಆಸ್ಪತ್ರೆ ಶವಾಗಾರ­ದಲ್ಲಿ ಇಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು ವಾರಸುದಾರರು ಹೊಸಕೋಟೆ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry