ದೊಡ್ಡಬಳ್ಳಾಪುರ: ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ

7

ದೊಡ್ಡಬಳ್ಳಾಪುರ: ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ

Published:
Updated:

ದೊಡ್ಡಬಳ್ಳಾಪುರ: ನಗರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಅ.12 ರವರೆಗೆ ನಡೆಯಲಿರುವ ಅಖಿಲ ಭಾರತ 22ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾ ಕೂಟಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.ನವೋದಯ ವಿದ್ಯಾಲಯ ಸಮಿತಿ ಆಯುಕ್ತ ಅಪೂರ್ವ ಚಂದ್ರ ಕ್ರೀಡಾಕೂಟವನ್ನು ಉದ್ಘಾಟಿಸಿದರು. `ಕ್ರೀಡೆಗಳು, ದೈಹಿಕ ಹಾಗೂ ಮಾನಸಿಕ ಚೈತನ್ಯಕ್ಕೆ ಪೂರಕವಾಗುವುದು. ಬಾಂಧವ್ಯವನ್ನು ಇಮ್ಮಡಿಗೊಳಿಸುತ್ತವೆ~ ಎಂದು ಅವರು ಅಭಿಪ್ರಾಯ ಪಟ್ಟರು.ಸಮಾರಂಭದಲ್ಲಿ ಬೆಂಗಳೂರು ಗ್ರಾ.ಜಿಲ್ಲಾಧಿಕಾರಿ ಆರ್.ಕೆ.ರಾಜು, ನವೋದಯ ವಿದ್ಯಾಲಯ ಸಮಿತಿ ಜಂಟಿ ಆಯುಕ್ತ ಟಿ.ಸಿ.ಎಸ್.ನಾಯ್ಡು, ಉಪ ಆಯುಕ್ತ ಶಡಗೋಪನ್, ಇಂಟೆಲ್ ಕಂಪನಿಯ ವ್ಯವಸ್ಥಾಪಕ ವಿಜಯ ಶಂಕರ್, ನವೋದಯ ವಿದ್ಯಾಲಯದ ಪ್ರಾಚಾರ್ಯ ಟಿ.ಗೋಪಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ ನವೋದಯ  ಸಭಾಂಗಣದಲ್ಲಿ ಇಂಟೆಲ್ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry