ಸೋಮವಾರ, ಏಪ್ರಿಲ್ 19, 2021
30 °C

ದೊಡ್ಡಬ್ಯಾಡಿಗೆರೆ ಕೆರೆಗೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಜಿಲ್ಲೆಯ ಎಲ್ಲ ಕೆರೆಗಳೂ ಹಾಳು ಬಿದ್ದು ಹೋಗಿವೆ. ಆದರೆ ಅಲ್ಲೊಂದು ಇಲ್ಲೊಂದರಂತೆ ಕೆರೆಗಳು ಪುನರುಜ್ಜೀವನಗೊಳ್ಳುತ್ತಿರುವುದು ಸಂತೋಷ ಮೂಡಿಸುವಂಥ ವಿಚಾರವಾಗಿದೆ. ಬೇಲೂರು ತಾಲ್ಲೂಕಿನ ದೊಡ್ಡಬ್ಯಾಡಿಗೆರೆ ಕೆರೆ ಇಂಥ ಅಭಿವೃದ್ಧಿ ದಿಕ್ಕಿನಲ್ಲಿ ಸಾಗಿದೆ.ಬರಡು ಜಮೀನುಗಳಿಗೆ ನೀರಾವರಿ ಕಲ್ಪಿಸುವ ಕೇಂದ್ರ ಸರ್ಕಾರದ ಯೋಜ ನೆಯಡಿ ಸಣ್ಣನೀರಾವರಿ ಇಲಾಖೆ ಈ ಕೆರೆಗೆ ಕಾಯಕಲ್ಪ ನೀಡುತ್ತಿದೆ.ಸುತ್ತಮುತ್ತ ಬೆಟ್ಟಗುಡ್ಡಗಳ ಸಾಲು. ಸುಂದರ ಪ್ರಕೃತಿಯ ಮಡಿಲಿ ನಲ್ಲಿರುವ ದೊಡ್ಡಬ್ಯಾಡಿಗೆರೆ ಸಮೀಪ ದಲ್ಲಿರುವ ಕೆರೆಯನ್ನು ಅಭಿವೃದ್ಧಿ ಗೊಳಿಸಿ ಬರಡು ಜಮೀನಿಗೆ ನೀರು ಹರಿಸಬೇಕು ಎಂಬುದು ಜನರ ಹಲವು ದಿನಗಳ ಬೇಡಿಕೆ. ಗ್ರಾಮಸ್ಥರ ಇಂಗಿತ ವನ್ನು ಅರಿತ ಸಣ್ಣ ನೀರಾವರಿ ಇಲಾಖೆ ಈ ಕೆರೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿ ಸಿತು. ಕೇಂದ್ರ ಸರ್ಕಾರ ರೂ.1.5 ಕೋಟಿ ಹಣ ಬಿಡುಗಡೆ ಮಾಡಿದೆ.ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಕೆರೆಯ ಅಭಿವೃದ್ಧಿಗೆ ಮುಂದಾಗಿದೆ. ಹೊಸಕೆರೆ ನಿರ್ಮಾಣದ ಬಹುತೇಕ ಕಾಮಗಾರಿ ಪೂರ್ಣ ಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಹೊಸಕೆರೆ ಉದ್ಘಾಟನೆಗೆ ಸಜ್ಜುಗೊಳ್ಳ ಲಿದೆ. ಕೆರೆಯ ಅಭಿವೃದ್ಧಿಗೆ ಯಾವುದೇ ರಾಜಕಾರಣಿಯ ಸಹಕಾರವಿಲ್ಲದೆ, ಇಲಾಖೆಯ ಅಧಿಕಾರಿಗಳೇ ಸ್ವಯಂ ಪ್ರೇರಿತರಾಗಿ ಕೆರೆ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ 7 ಎಂ.ಸಿ.ಎಫ್.ಟಿ.ಯಾಗಿದ್ದು, ಇದರಿಂದ ಸುಮಾರು ನೂರಕ್ಕೂ ಹೆಚ್ಚು ಎಕರೆ ಬರಡು ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಈ ಕೆರೆಯ ಅಭಿವೃದ್ಧಿ ಬಯಲುಸೀಮೆಯ ಜನರಿಗೆ ವರದಾನವಾಗಲಿದೆ.ಹೊಸಕೆರೆಯ ಏರಿಯನ್ನು 10 ಮೀಟರ್ ಎತ್ತರಕ್ಕೆ ನಿರ್ಮಿಸಲಾಗಿದೆ. ಕೆರೆಯ ಏರಿ 117 ಮೀ. ಉದ್ದವಿದೆ. 1.5ಕಿ.ಮೀ. ಉದ್ದದ ಬಲದಂಡೆ ಕಾಲುವೆ ಮತ್ತು 1ಕಿ.ಮೀ. ಉದ್ದದ ಎಡದಂಡೆ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯ ಎರಡೂ ಬದಿಗಳಲ್ಲಿ ತೂಬುಗಳನ್ನು ನಿರ್ಮಿಸಲಾ ಗಿದೆ. ಕೆರೆಗೆ ಹೊಸ ಕೋಡಿ ನಿರ್ಮಿಸ ಲಾಗಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಹೊಸದಾಗಿ ನಿರ್ಮಿಸಿದ್ದ ಕೆರೆಯ ಏರಿ ಸಂಪೂರ್ಣವಾಗಿ ನೀರಿ ನಲ್ಲಿ ಮುಳುಗಿತ್ತಾದರೂ ಏರಿಗೆ ಯಾವುದೇ  ಹಾನಿ ಸಂಭವಿಸದಿರುವ ಬಗ್ಗೆ ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿ ಸುತ್ತಾರೆ. ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹಾಲಿ ಇರುವು ದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿಸು ವಷ್ಟು ನೀರಿನ ಪ್ರಮಾಣ ಮತ್ತು ಅವಕಾಶಗಳು ಇಲ್ಲಿದ್ದರೂ ಹಿರಿಯ ಅಧಿಕಾರಿಗಳ ಅಸಹಕಾರ ದಿಂದಾಗಿ ಇದು ಕಾರ್ಯಗತಗೊಳ್ಳು ತ್ತಿಲ್ಲ ಎಂಬ ಕೊರತೆ ಇದೆ.ದೊಡ್ಡಬ್ಯಾಡಿಗೆರೆಯಿಂದ ಹೊಸ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಬಿದ್ದು ಹಾಳಾಗಿದ್ದ ಕಾರಣ ಮೂರು ಕಿ.ಮೀ. ರಸ್ತೆಯನ್ನು ರೂ.32 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾ ಗಿದೆ. ಕಾಲುವೆ ಕಾಮಗಾರಿ ಮಾತ್ರ ಬಾಕಿಯಿದ್ದು, ಇನ್ನೆರಡು ತಿಂಗ ಳಲ್ಲಿ ಈ ಕಾಮಗಾ ರಿಯೂ ಪೂರ್ಣ ಗೊಳ್ಳಲಿದೆ ಎಂದು ಸಣ್ಣನೀರಾವರಿ ಇಲಾಖೆಯ ಎಂಜಿನಿಯರ್ ಮತ್ತು ಬೇಲೂರು ವಿಭಾಗದ ಶಾಖಾಧಿಕಾರಿ ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.ದೊಡ್ಡಬ್ಯಾಡಿಗೆರೆಯ ಹೊಸ ಕೆರೆಯ ಸುತ್ತಲಿನಲ್ಲಿ ಬೆಟ್ಟಗುಡ್ಡಗಳ ಸುಂದರ ಪ್ರಕೃತಿಯ ತಾಣವಿದೆ. ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ಅವಕಾಶಗಳು ಸಾಕಷ್ಟಿವೆ. ಅರಣ್ಯ ಇಲಾಖೆ ಈ ಬಗ್ಗೆ ಆಸಕ್ತಿ ತೆಳೆದರೆ ಈ ಕೆರೆಯನ್ನು ವಿಹಾರ ತಾಣವನ್ನಾಗಿ ಅಭಿವೃದ್ಧಿ ಪಡಿಸಬಹುದಾಗಿದೆ. ಇಲಾಖೆಯ ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳಿಗೂ ಈ ಕುರಿತು ಇಚ್ಛಾಶಕ್ತಿಯ ಅವಶ್ಯಕತೆಯಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.