ದೊಡ್ಡ ಹಲ್ಲಿ

7

ದೊಡ್ಡ ಹಲ್ಲಿ

Published:
Updated:

ಹಲ್ಲಿಗಳಲ್ಲಿಯೇ ಅತ್ಯಂತ ದೊಡ್ಡ ಮತ್ತು ಇಂದಿಗೂ ಜೀವಂತವಾಗಿರುವ ಹಲ್ಲಿ ಈ ಕೊಮೊಡೊ ಡ್ರ್ಯಾಗನ್. ಇಂಡೋನೇಷಿಯಾ ದೇಶಕ್ಕೆ ಸೇರಿದ ಕೊಮೊಡೊ ಹೆಸರಿನ ದ್ವೀಪದಲ್ಲಿ ಇದು ನೆಲೆಸಿರುವುದರಿಂದ ಇದಕ್ಕೆ ಆ ಹೆಸರು ಪ್ರಾಪ್ತವಾಗಿದೆ.

3.5 ಮೀಟರ್ ಉದ್ದ ಬೆಳೆಯುವ ಈ ಡ್ರ್ಯಾಗನ್‌ಗಳು 136 ಕೆಜಿ ತೂಕ ಇರುತ್ತವೆ. ಇವುಗಳಿಗೆ ಉದ್ದನೆಯ ತೆಳು ನಾಲಿಗೆ ಇರುತ್ತದೆ. ಅದನ್ನು ಅದು ಮೂಗಿನಂತೆಯೂ ಬಳಸಿಕೊಳ್ಳುತ್ತದೆ. ಆಸ್ಟ್ರೇಲಿಯಾದಲ್ಲಿ 3.8 ಮಿಲಿಯನ್ ವರ್ಷಗಳ ಹಿಂದೆ ಕೊಮೊಡೊ ಡ್ರ್ಯಾಗನ್ ಹೋಲುವ ಪ್ರಾಣಿ ಇತ್ತೆಂದು ಹೇಳುವ ಪಳಿಯುಳಿಕೆ ದೊರಕಿದೆ.  ಕೀಟಗಳು, ಹಕ್ಕಿಗಳು, ಸಸ್ತನಿಗಳನ್ನು ತಿಂದು ಬದುಕುವ ಕೊಮೊಡೊ ಡ್ರ್ಯಾಗನ್‌ಗಳು ಕೆಲವೊಮ್ಮೆ ಜಿಂಕೆ ಮತ್ತು ಹಂದಿಗಳನ್ನೂ ಭೇಟಿಯಾಡಿ ಅಚ್ಚರಿ ಮೂಡಿಸಿವೆ. 30 ವರ್ಷ ಬದುಕುವ ಇವು ನದಿ ತೀರಗಳಲ್ಲಿ ಗುಂಡಿ ತೋಡಿ ಮೊಟ್ಟೆ ಹಾಕುತ್ತವೆ.

ಅವುಗಳ ಚರ್ಮ ತುಂಬಾ ಕಠಿಣವಾಗಿದ್ದು, ಅದನ್ನು ಜಾಕೆಟ್ ಮಾಡಲು ಬಳಸಲಾಗುತ್ತದೆ. ಅದಕ್ಕಾಗಿ ಅವುಗಳ ಮಾರಣಹೋಮ ಮಾಡಲಾಗುತ್ತಿದೆ. ಪ್ರಸ್ತುತ ಇಂಡೋನೇಷಿಯಾ ಸರ್ಕಾರ ಅವುಗಳ ಬೇಟೆ ವಿರುದ್ಧ ಬಲವಾದ ಕಾನೂನು ಹೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry