ದೋಣಿಗಳ ಡಿಕ್ಕಿ 38 ಜನರ ಸಾವು

7

ದೋಣಿಗಳ ಡಿಕ್ಕಿ 38 ಜನರ ಸಾವು

Published:
Updated:

ಹಾಂಕಾಂಗ್ (ಎಎಫ್‌ಪಿ): ಎರಡು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ 38 ಮಂದಿ ಮೃತಪಟ್ಟಿರುವ ಘಟನೆ ಹಾಂಗ್‌ಕಾಂಗ್‌ನಲ್ಲಿ ಮಂಗಳವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಾಷ್ಟ್ರೀಯ ದಿನದ ಅಂಗವಾಗಿ ವಿಕ್ಟೋರಿಯಾ ಬಂದರಿನಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ  ಬಾಣ-ಬಿರುಸುಗಳ ಪ್ರದರ್ಶನವನ್ನು ನೋಡಲು 120ಕ್ಕೂ ಹೆಚ್ಚು ಪ್ರಯಾಣಿಕರು ಹಾಂಗ್‌ಕಾಂಗ್ ಎಲೆಕ್ಟ್ರಿಕ್ ಕಂಪನಿಯ ದೋಣಿಯಲ್ಲಿ ಹೋಗುತ್ತಿದ್ದಾಗ ಲಮ್ಮಾ ದ್ವೀಪದ ಬಳಿ ಈ ಅಪಘಾತ ಸಂಭವಿಸಿದೆ. 100ಕ್ಕೂ ಅಧಿಕ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಂಬತ್ತು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ರಕ್ಷಣಾ ಕಾರ್ಯ ಮುಂದುವರಿದಿದೆ  ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.ಕಳೆದ ದಶಕಗಳಲ್ಲಿ ಸಂಭವಿಸಿರುವ ಅತ್ಯಂತ ಭೀಕರ ದುರಂತ ಇದಾಗಿದೆ. ಅಗತ್ಯ ರಕ್ಷಣಾ ಕ್ರಮಗಳನ್ನು ಅನುಸರಿಸದ ಕಾರಣ ದೋಣಿ ಮತ್ತು ಹಡಗಿನ ಒಟ್ಟು ಆರು ಚಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ ಹಿಂದೆ 1971ರಲ್ಲಿ ಹಾಂಗ್‌ಕಾಂಗ್ ಮಖೌ ದೋಣಿಯು ಚಂಡಮಾರುತಕ್ಕೆ ಸಿಲುಕಿ 88 ಜನ ಮೃತಪಟ್ಟಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry