ಶನಿವಾರ, ಆಗಸ್ಟ್ 17, 2019
27 °C

ದೋಣಿ ಮುಳುಗಿ 40 ಜನ ಕಣ್ಮರೆ

Published:
Updated:

>ಕ್ವಾಲಾಲಂಪುರ (ಎಎಫ್‌ಪಿ): ದೋಣಿಯಲ್ಲಿ ತಾಯ್ನಾಡಿಗೆ ವಾಪಸ್ ಬರುತ್ತಿದ್ದ ಇಂಡೊನೇಷ್ಯಾದ 40 ಅಕ್ರಮ ವಲಸಿಗರು ಮಲೇಷ್ಯಾದ ಕರಾವಳಿ ತೀರದಲ್ಲಿ ನಾಪತ್ತೆಯಾಗಿದ್ದಾರೆ.ದೋಣಿಯಲ್ಲಿ ಒಟ್ಟು 44 ಜನ ಪ್ರಯಾಣಿಸುತ್ತಿದ್ದರು. ದೋಣಿ ಮುಗುಚಿದ ಪರಿಣಾಮ 44 ಜನರ ಪೈಕಿ ಕೇವಲ ನಾಲ್ವರನ್ನು ಮಾತ್ರ ರಕ್ಷಿಸಲಾಯಿತು. ಉಳಿದ 40 ಮಂದಿ ಕಣ್ಮರೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಣ್ಮರೆಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಕಣ್ಮರೆಯಾದವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

Post Comments (+)