ಗುರುವಾರ , ಅಕ್ಟೋಬರ್ 17, 2019
22 °C

ದೋನಿಗೆ ಒಂದು ಟೆಸ್ಟ್ ನಿಷೇಧ

Published:
Updated:

ಪರ್ತ್ (ಪಿಟಿಐ): ಇಲ್ಲಿ ಭಾನುವಾರ ಹೀನಾಯ ಸೋಲು ಕಂಡ ಭಾರತ ತಂಡ ಮತ್ತೊಂದು ಆಘಾತ ಅನುಭವಿಸಿದೆ. ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕ್ರಮಕ್ಕೆ ನಾಯಕ ದೋನಿಗೆ ಒಂದು ಟೆಸ್ಟ್ ನಿಷೇಧ ಶಿಕ್ಷೆ ವಿಧಿಸಲಾಗಿದೆ.ಪಂದ್ಯ ಸಂಭಾವನೆಯ ಶೇ. 40 ರಷ್ಟು ದಂಡವನ್ನು ದೋನಿಗೆ ವಿಧಿಸಿದ್ದರೆ, ಇತರ ಆಟಗಾರರಿಗೆ ಶೇ. 20 ರಷ್ಟು ವಿಧಿಸಲಾಗಿದೆ. ಕಳೆದ 12 ತಿಂಗಳಲ್ಲಿ  ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದು  ಎರಡನೇ ಬಾರಿಯಾಗಿದ್ದು, ಕಳೆದ ಜುಲೈನಲ್ಲೆ ಈ ಬಗ್ಗೆ ದೋನಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು.

 

Post Comments (+)