ದೋನಿ ಈಗ ಡಾ. ದೋನಿ

7

ದೋನಿ ಈಗ ಡಾ. ದೋನಿ

Published:
Updated:
ದೋನಿ ಈಗ ಡಾ. ದೋನಿ

ಲೀಸ್ಟರ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಇಲ್ಲಿನ ಪ್ರತಿಷ್ಠಿತ ಡೇ ಮೌಂಟ್‌ಫೋರ್ಟ್ ವಿಶ್ವವಿದ್ಯಾಲಯ `ಗೌರವ ಡಾಕ್ಟರೇಟ್~ ನೀಡಿದೆ.ಅತ್ಯುತ್ತುಮ ನಾಯಕತ್ವ ಗುಣ ಹೊಂದಿರುವ ದೋನಿ, ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪ್ ಜಯಿಸಿ ಕೊಟ್ಟಿದ್ದಾರೆ. ಆದ್ದರಿಂದ ಅವರಿಗೆ ಈ ಗೌರವ ಪ್ರದಾನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.ದೋನಿ ನಾಯಕತ್ವದಲ್ಲಿ ಭಾರತ ತಂಡ 2007ರಲ್ಲಿ ಐಸಿಸಿ ಟ್ವೆಂಟಿ- 20 ಚಾಂಪಿಯನ್‌ಷಿಪ್, 2007-08ರಲ್ಲಿ ಕಾಮನ್‌ವೆಲ್ತ್ ಏಕದಿನ ಸರಣಿ ಜಯಿಸಿದೆ. 2008 ಹಾಗೂ 09ನೇ ಸಾಲಿನಲ್ಲಿ ದೋನಿ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ.

 

`ಇದೊಂದು ಅಮೂಲ್ಯವಾದ ಕ್ಷಣ. ಈ ಗೌರವ ಸ್ವೀಕರಿಸಲು ಹೆಮ್ಮೆ ಎನಿಸುತ್ತಿದೆ. ಡಾಕ್ಟರೇಟ್ ಸಿಗುತ್ತಿರುವುದು ಕೇವಲ ನನಗಲ್ಲ. ನಾನು ಸಾಧನೆ ಮಾಡಲು ನೆರವಾದ ಇಡೀ ಭಾರತ ತಂಡಕ್ಕೆ~ ಎಂದು ಡಾ. ದೋನಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry