`ದೋನಿ ಕೆಳಗಿಳಿಸಿ ಕೊಹ್ಲಿಗೆ ಪಟ್ಟ ನೀಡಿ'

7
ವೀರೂ ಬೇಜವಾಬ್ದಾರಿ ವರ್ತನೆಗೆ ಗಾವಸ್ಕರ್ ಆಕ್ರೋಶ

`ದೋನಿ ಕೆಳಗಿಳಿಸಿ ಕೊಹ್ಲಿಗೆ ಪಟ್ಟ ನೀಡಿ'

Published:
Updated:

ನಾಗಪುರ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ ಹೀನಾಯ ಸೋಲು ಕಾಣುತ್ತಿದ್ದಂತೆ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ತಲೆದಂಡಕ್ಕೆ ಆಗ್ರಹ ಹೆಚ್ಚಿದೆ. ಈ ಬಗ್ಗೆ ಮೊದಲು ಧ್ವನಿ ಎತ್ತಿರುವುದು ಸುನಿಲ್ ಗಾವಸ್ಕರ್.ದೋನಿ ಅವರನ್ನು ಕೆಳಗಿಳಿಸಿ ವಿರಾಟ್ ಕೊಹ್ಲಿಗೆ ನಾಯಕತ್ವ ಪಟ್ಟ ನೀಡಲು ಅವರು ಸಲಹೆ ನೀಡಿದ್ದಾರೆ. `ಬದಲಿ ವ್ಯವಸ್ಥೆ ಇಲ್ಲ ಎಂದು ನಾನು ತಿಳಿದುಕೊಂಡ್ದ್ದಿದೆ. ಆದರೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಷ್ಟದ ಸನ್ನಿವೇಶದಲ್ಲಿ ಕೊಹ್ಲಿ ಶತಕ ಗಳಿಸಿದ್ದು ನನ್ನ ಮನಸ್ಸು ಬದಲಾಯಿಸಿದೆ. ದೋನಿ ಅವರನ್ನು ಕೆಳಗಿಳಿಸಿ ವಿರಾಟ್‌ಗೆ ನಾಯಕತ್ವ ಪಟ್ಟ ನೀಡಬೇಕು' ಎಂದಿದ್ದಾರೆ.ಎರಡು ಕ್ಯಾಚ್ ಬಿಟ್ಟು ಕ್ರೀಡಾಂಗಣದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ ವೀರೇಂದ್ರ ಸೆಹ್ವಾಗ್ ಅವರ ಬಗ್ಗೆ ಮಾಜಿ ನಾಯಕ ಗಾವಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಸೆಹ್ವಾಗ್ ಸ್ಲಿಪ್‌ನಲ್ಲಿ ನಿಂತ ಕ್ರಮವೇ ಸರಿಯಿಲ್ಲ. ಅವರ ದೇಹ ಬಾಗುತ್ತಿಲ್ಲ. ಇಂಥ ಆಟಗಾರರಿಂದ ಏನನ್ನು ನಿರೀಕ್ಷಿಸಬಹುದು. ಸ್ಪಿಪ್‌ನಲ್ಲಿ ಕ್ಯಾಚ್‌ಗಳು ನಿಂತಲ್ಲಿಗೆ ಬರುವುದಿಲ್ಲ' ಎಂದು ಗಾವಸ್ಕರ್ ಹೇಳಿದ್ದಾರೆ.ಮೊದಲ ಸ್ಲಿಪ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ವೀರೂ ಭಾನುವಾರ ಕೆವಿನ್ ಪೀಟರ್ಸನ್ ಕ್ಯಾಚ್ ಕೈಚೆಲ್ಲಿದ್ದರು. ಸೋಮವಾರ ಇಯಾನ್ ಬೆಲ್ ಕ್ಯಾಚ್ ಬಿಟ್ಟರು. ಅವರು ಆಗ 75 ರನ್ ಗಳಿಸ್ದ್ದಿದರು. ಆ ಜೀವದಾನ ಸದುಪಯೋಗಪಡಿಸಿಕೊಂಡ ಬೆಲ್ ಶತಕ ಗಳಿಸಿದರು.

`ತಂಡದ ಶ್ರೇಯಕ್ಕೆ ಬದ್ಧರಾಗಿದ್ದಾಗ ನಿಮ್ಮಿಂದ ಖಂಡಿತ ಉತ್ತಮ ಪ್ರದರ್ಶನ ಮೂಡಿಬರುತ್ತದೆ. ಬದ್ಧತೆಗೆ ದ್ರಾವಿಡ್ ಅತ್ಯುತ್ತಮ ಉದಾಹರಣೆ. ಅವರ ರೀತಿ ಸ್ಲಿಪ್‌ನಲ್ಲಿ ಸೆಹ್ವಾಗ್ ಫೀಲ್ಡ್ ಮಾಡಲಾರರು' ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry