ದೋನಿ ದ್ವಿಶತಕ: ಭಾರತಕ್ಕೆ 135ರನ್‌ಗಳ ಮುನ್ನಡೆ

7

ದೋನಿ ದ್ವಿಶತಕ: ಭಾರತಕ್ಕೆ 135ರನ್‌ಗಳ ಮುನ್ನಡೆ

Published:
Updated:
ದೋನಿ ದ್ವಿಶತಕ: ಭಾರತಕ್ಕೆ 135ರನ್‌ಗಳ ಮುನ್ನಡೆ

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ಅಜೇಯ ದ್ವಿಶತಕ ಸಿಡಿಸಿದ್ದಾರೆ.ಮೂರನೆ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ನಷ್ಟಕ್ಕೆ 516 ರನ್‌ಗಳಿಸಿದೆ. ಇದರೊಂದಿಗೆ ಭಾರತ 135 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.ಮೂರನೇ ದಿನದಾಟದ ಆರಂಭದಲ್ಲೇ ಸಚಿನ್ ಔಟಾದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆ ಸೇರಿದ ನಾಯಕ ದೋನಿ ಉತ್ತಮ ಜತೆಯಾಟವಾಡಿದರು. ಕೊಹ್ಲಿ ಕೂಡ ಶತಕ ಸಿಡಿಸುವ ಮೂಲಕ ಗಮನ ಸೆಳೆದರು. ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದ ಕೊಹ್ಲಿ ಮತ್ತು ದೋನಿ ತಂಡದ ಮೊತ್ತ 500 ರನ್‌ಗಳ ಗಡಿ ದಾಟಲು ನೆರವಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry