ದೋನಿ ಪಡೆಗೆ ಮಹಾ ಸವಾಲು

5

ದೋನಿ ಪಡೆಗೆ ಮಹಾ ಸವಾಲು

Published:
Updated:

ಮುಂಬೈ (ಪಿಟಿಐ): ಇಂಗ್ಲೆಂಡ್ ಪ್ರವಾಸದಲ್ಲಿ ಮುಖಭಂಗ ಅನುಭವಿಸಿ `ಕರಾಳ~ ನೆನಪುಗಳನ್ನು ಹೊತ್ತು ತಂಡ ದೋನಿ ನೇತೃತ್ವದ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಪ್ರವಾಸ ಭಾರಿ ಸವಾಲಿನಿಂದ ಕೂಡಿರಲಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ಎದುರಿನ ಸರಣಿ ವಿಶ್ವಕಪ್ ಚಾಂಪಿಯನ್ನರಿಗೆ ಅಷ್ಟು ಸವಾಲು ಎನ್ನಿಸದು. ಆದರೂ ಟೆಸ್ಟ್ ಹಾಗೂ ಏಕದಿನ ಸರಣಿ ಸೋಲಿನ ಮುಯ್ಯಿ ತೀರಿಸಲು ದೋನಿ ಪಡೆದ ಕಾತರದಲ್ಲಿದೆ ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಈ ಅಭಿಪ್ರಾಯ ವ್ಯಕ್ತಪಡಿಸಿದರು.

 

ಭಾರತ ಇದೇ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಕೇವಲ ಒಂದು ಸರಣಿಯಲ್ಲಿ ಸೋಲು ಕಂಡಿದ್ದಕ್ಕೆ ಮಾತ್ರ ನಾಯಕನ ಸಾಮರ್ಥ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಆದರೆ, ಕಾಂಗರೂಗಳ ನಾಡಿನಲ್ಲಿ ಮಹಿ ಪಡೆ ತನ್ನ ನಿಜವಾದ ಸಾಮರ್ಥ್ಯ ಸಾಬೀತು ಪಡಿಸಬೇಕಿದೆ ಎಂದು ಗಂಗೂಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry